ಕರಾವಳಿ

ಸರಕಾರದಿಂದಲೇ ತುಳುನಾಡಿನ ದೈವೀ ಶಕ್ತಿಗಳಿಗೆ ಅವಮಾನ

ನ್ಯೂಸ್ ನಾಟೌಟ್: ತುಳುನಾಡಿನ ದೈವೀ ಶಕ್ತಿಗಳನ್ನು ಇದುವರೆಗೆ ಕೆಲವು ದುಷ್ಟ ಶಕ್ತಿಗಳು ಅವಮಾನ ಮಾಡುತ್ತಿದ್ದವು. ಇದೀಗ ಖುದ್ದಾಗಿ ಸರಕಾರವೇ ಅವಮಾನ ಮಾಡಿ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.

ಕರಾವಳಿಯ ಜನರು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಆರಾಧಿಸುವ ದೈವಾರಾಧನೆಯನ್ನು ಕರ್ನಾಟಕ ಸರಕಾರದ ಪ್ರವಾಸೋ ದ್ಯಮ ಇಲಾಖೆಯ ವೆಬ್ ಸೈಟ್‌ ನಲ್ಲಿ ಅವಮಾನ ಮಾಡಲಾಗಿದೆ. ಭೂತಾರಾಧನೆ ಎಂಬ ತಲೆಬರಹದಲ್ಲಿರುವ ದೈವಾರಾಧನೆ ವಿಚಾರ ಇದೀಗ ಟ್ರೋಲ್ ಆಗಿದೆ. ಈ ವೆಬ್‌ ಸೈಟ್ ನಲ್ಲಿ ಪ್ರಕಟವಾದ ಅಂಶಗಳಲ್ಲಿ ಭೂತದ ಕೋಲ ಎಂಬ ಪದವು ಭೂತದ ಕೊಳ ಎಂದಾಗಿದೆ. ಅಲ್ಲದೆ ಭೂತಾರಾಧನೆಯನ್ನು ದೆವ್ವದ ಆರಾಧನೆ. ಭೂತಗಳನ್ನು ಪ್ರತಿನಿಧಿಸುವ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಡ್ರಮ್ ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಮೆರವಣಿಗೆ ಮಾಡುತ್ತಾರೆ. ಕತ್ತಿ ಮತ್ತು ಗಂಟೆಗಳೊಂ ದಿಗೆ ಕುಣಿಯುತ್ತ ನರ್ತಕಿ ತಾನು ಪ್ರತಿನಿಧಿಸುವ ದೆವ್ವದ ಅನುಕರಣೆಯಲ್ಲಿ ಸುತ್ತುತ್ತಾನೆ. ಉದ್ರಿಕ್ತವಾಗಿ ಮೇಲಕ್ಕೆ ಕೆಳಕ್ಕೆ ಹೆಜ್ಜೆ ಹಾಕುತ್ತಾನೆ ಎಂದು  ಆಕ್ಷೇಪಾರ್ಹವಾಗಿ ಬರೆಯಲಾಗಿದೆ.

ವೆಬ್ ಸೈಟ್ ನಲ್ಲಿ ದೈವಾರಾಧನೆ ವಿಚಾರದಲ್ಲಿ ಆಕ್ಷೇಪಾರ್ಹ ಪದ ಉಪಯೋಗಿಸಿರುವುದನ್ನು ತುಳುವಿನ ಟ್ರೋಲ್ ಪೇಜ್ ನವರು ಟ್ರೋಲ್ ಮಾಡಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆಯು ವೆಬ್ ಸೈಟ್ ನಲ್ಲಿನ ಭೂತ ಕೋಲ ಪೇಜ್ ಅನ್ನು ಡಿಲಿಟ್ ಮಾಡಿದೆ.

Related posts

“ಅಡಿಕೆಯ ಅಕ್ರಮ ಆಮದಿನಿಂದಾಗಿ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ”,ಕೇಂದ್ರ ಸರಕಾರ ಮತ್ತು ಕ್ಯಾಂಪ್ಕೋ ನಿಲುವಿಗೆ ಎಂ.ವೆಂಕಪ್ಪ ಗೌಡ ಖಂಡನೆ

ಬುರ್ಖಾ ಧರಿಸಿ ಕಾಲಿ ಬಿಂದಿಗೆ ಹಿಡಿದು ಬಂದ ವಾಟಾಳ್ ನಾಗರಾಜ್..! ವಾಟಾಳ್ ವೇಷ ವಿವಾದಕ್ಕೆ ತಿರುಗಲಿದೆಯಾ? ಯಾಕೆ ಈ ಹೊಸಾ ಅವತಾರ?

ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ ಕಾರ್ಯಕ್ರಮ