ಕ್ರೈಂರಾಜ್ಯ

ಕಾಮುಕ ಶಿಕ್ಷಕ ಸಾದಿಕ್ ಬೇಗ್ ನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಪಾಠ..! ರಾತೋರಾತ್ರಿ ಬಂಧಿಸಿ ಜೈಲಿಗಟ್ಟಿದ ಪೊಲೀಸರು

217

ನ್ಯೂಸ್‌ ನಾಟೌಟ್‌: ಅಕ್ಷರ ಕಲಿಸುವ ಗುರುವೇ ತನ್ನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಮುಕ ಶಿಕ್ಷಕನ ಹೆಸರು ಸಾದಿಕ ಬೇಗ್. ಈತ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಈತನ ಶೈಕ್ಷಣಿಕ ಚಟುವಟಿಕೆಗಿಂತ ಲೈಂಗಿಕ ಶಿಕ್ಷಣವೇ ಹೆಚ್ಚಾಗಿತ್ತು. ಅಲ್ಲದೇ ತನ್ನ ಶಾಲೆಯ ವಿದ್ಯಾರ್ಥಿನಿಯರ ಅಂಗಾಂಗ ಸ್ಪರ್ಶಿಸುವ ವಿಚಿತ್ರ ಚಟವಿತ್ತು. ವಿದ್ಯಾರ್ಥಿನಿ ಪೋಷಕರ ಬಳಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಾವಾಗ ಶಿಕ್ಷಕನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಮಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಪಾಠ ಹೇಳುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದ. ಬ್ಯಾಡ್ ಟಚ್ ಮಾಡುವ ಮೂಲಕ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಇರಿಸುಮುರಿಸು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇದರಿಂದ ನೊಂದ ವಿದ್ಯಾರ್ಥಿನಿಯ ಪೋಷಕರು ಚಿಕ್ಕೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ತಡರಾತ್ರಿ ಆರೋಪಿ ಶಿಕ್ಷಕ ಸಾದಿಕ್ ಬೇಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

See also  ಹಾರಾಟದ ವೇಳೆ ಆಗಸದಲ್ಲಿ ಅಲುಗಾಡಿದ ವಿಮಾನ, ಕಿರುಚಿದ ಪ್ರಯಾಣಿಕರು..! ಅಷ್ಟಕ್ಕೂ ಅಲ್ಲೇನಾಯ್ತು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget