ರಾಜ್ಯವೈರಲ್ ನ್ಯೂಸ್

ಸರ್ಕಾರಿ ಶಾಲೆಯ ಹಾಲಿನ ಪುಡಿ ಮನೆಗೆ ಕದ್ದೊಯ್ಯುತ್ತಿದ್ದ ಮುಖ್ಯ ಶಿಕ್ಷಕ..! ಹಾಲಿನ ಪ್ಯಾಕೆಟ್‌ ಗಳ ಸಮೇತ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಶಿಕ್ಷಕ..!

ನ್ಯೂಸ್ ನಾಟೌಟ್: ಮಕ್ಕಳ ಅಪೌಷ್ಠಿಕತೆ ಹೊಗಲಾಡಿಸಲು ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿದ್ದ ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದ ಮುಖ್ಯ ಶಿಕ್ಷಕ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮೈಸೂರಿನ ಹೆಚ್.ಡಿ. ಕೋಟೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯ ಗಣೇಶ್ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ ಎಂದು ಗುರುತಿಸಲಾಗಿದೆ. ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಉಚಿತವಾಗಿ ನೀಡುವ ಒಟ್ಟು 10 ಹಾಲಿನ ಪುಡಿಯ ಪ್ಯಾಕೇಟ್ ಗಳು ಶಿಕ್ಷಕ ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ.

ಹಾಲಿನ ಪ್ಯಾಕೆಟ್‌ಗಳ ಅವಧಿ ಮೀರಿದ್ದರಿಂದ ಮನೆಗೆ ಕೊಂಡೊಯ್ಯುತ್ತಿದ್ದೆ ಎಂದು ಶಿಕ್ಷಕ ಸ್ಪಷ್ಟೀಕರಣ ಕೊಡಲು ಮುಂದಾಗಿದ್ದರು. ಆದರೆ ಹಾಲಿನ ಪ್ಯಾಕೆಟ್‌ಗಳ ಪರಿಶೀಲನೆ ಮಾಡಿದಾಗ ಬರುವ ಡಿಸೆಂಬರ್ ವರೆಗೂ ಹಾಲಿನ ಪುಡಿ ಬಳಕೆ ಮಾಡಲು ಅವಧಿ ಇರುವುದು ಖಾತರಿಯಾಗಿದೆ.
ಹಾಲಿನ ಪುಡಿಗಳ ಸಮೇತ ದ್ವಿಚಕ್ರ ವಾಹನವನ್ನು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/11-year-after-husband-wife-issue-viral-video-women-interview/
https://newsnotout.com/2024/08/puttur-wild-wild-boar-animal-kannada-news-scooter-driver/
https://newsnotout.com/2024/08/bengaluru-lady-case-under-twist-kannada-news-fir/
https://newsnotout.com/2024/08/duplicate-currency-note-kannada-news-youtube-puttur-mangaluru/
https://newsnotout.com/2024/08/mangaluru-kannada-news-students-gang-of-students-issue-police-case-foot-ball/

Related posts

ಮದುವೆ ಮಂಟಪದಲ್ಲಿ ಮದುವೆ ಶಾಸ್ತ್ರ ಬದಿಗಿಟ್ಟು ‘ಲೂಡೋ’ ಆಡುತ್ತಾ ಕುಳಿತ ಮದುಮಗ..! ಇಲ್ಲಿದೆ ವೈರಲ್ ಪೋಸ್ಟ್

ಮೊಬೈಲ್‌ ಕದ್ದು ಓಡುತ್ತಿದ್ದಾಗ ಕ್ಯಾಬ್‌ ಡಿಕ್ಕಿ..! ಈತನ ಸಂಬಂಧಿಕರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸ್ ಮನವಿ ಮಾಡಿದ್ದೇಕೆ? ಮುಂದೇನಾಯ್ತು..?

ಜಿಯೋ ಮಾಮಿ ಫಿಲ್ಮ್​ ಫೆಸ್ಟಿವಲ್‌ ನಲ್ಲಿ ಕಳಚಿದ ನಟಿಯ ಗೌನ್‌ ಸ್ಟ್ರಾಪ್..!ಪರಿಸ್ಥಿತಿ ನಿಭಾಯಿಸಿದ ರೀತಿಗೆ ಎಲ್ಲರ ಮೆಚ್ಚುಗೆ…ವಿಡಿಯೋ ವೀಕ್ಷಿಸಿ..