Latestಕ್ರೈಂವಿಡಿಯೋವೈರಲ್ ನ್ಯೂಸ್

ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ನಡುವೆ ಹೊಡೆದಾಟ..! ವಿಡಿಯೋ ವೈರಲ್

822

ನ್ಯೂಸ್ ನಾಟೌಟ್: ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡಬೇಕಾದವರೇ ಜಡೆ ಹಿಡಿದು ಹೊಡೆದಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.  

ಶಾಲೆಯ ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ನಡುವೆ ಜಗಳವು ಏರ್ಪಟ್ಟಿದೆ. ಇಬ್ಬರ ನಡುವೆ ಶುರುವಾದ ವಾಗ್ವಾದವು ಜುಟ್ಟು ಹಿಡಿದುಕೊಂಡು ಬಡಿದಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ. ಈ ಘಟನೆ ಭೋಪಾಲ್ ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಮಧ್ಯಪ್ರದೇಶದ ಖಾರ್ಗೋನ್‍ ನ ಸರ್ಕಾರಿ ಏಕಲವ್ಯ ಆದರ್ಶ ಶಾಲೆಯಲ್ಲಿ ನಡೆದಿದೆ.

ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಈ ವಿಡಿಯೋವನ್ನು formenindia ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಶಾಲೆಯ ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ.

ಈ ಜಗಳವನ್ನು ಲೈಬ್ರೆರಿಯನ್ ತನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಪ್ರಾಂಶುಪಾಲರು ಸಿಟ್ಟುಗೊಂಡಿದ್ದು, ಲೈಬ್ರೆರಿಯನ್ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಸಹ ಒಡೆದುಹಾಕಿರುವುದನ್ನು ನೋಡಬಹುದು. ಆ ಬಳಿಕ ಇಬ್ಬರ ನಡುವೆ ಮಾತಿನ ಚಕಾಮಕಿಯೂ ಏರ್ಪಟ್ಟಿದ್ದು, ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಜುಟ್ಟು ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಇಬ್ಬರೂ ಮಹಿಳೆಯರನ್ನು ಪ್ರಾಂಶುಪಾಲ ಪ್ರವೀಣ್ ದಹಿಯಾ ಮತ್ತು ಲೈಬ್ರೆರಿಯನ್ ಮಧುರಾಣಿ ಎಂದು ಗುರುತಿಸಲಾಗಿದ್ದು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ. 

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ 1.5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ..! ಎನಿದು ಕೇಂದ್ರ ಸರ್ಕಾರದ ಹೊಸ ಯೋಜನೆ..?

ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ..! ಶಾಸಕ ಸ್ಥಾನದಿಂದ ಅನರ್ಹ..?

ಸತತ 27 ಪ್ರಕರಣಗಳನ್ನು ಗೆದ್ದ ನಕಲಿ ವಕೀಲ ಅರೆಸ್ಟ್..! ನಕಲಿ ವಕೀಲನ ಅಸಲಿ ಕಥೆ..!

See also  ಮಿಕ್ಸರ್ ಗ್ರೈಂಡರ್ ​ಗೆ ಕೂದಲು ಸಿಲುಕಿ ಮಹಿಳೆ ದುರಂತ ಅಂತ್ಯ..! ಘಟನೆ ನಡೆದದ್ದೆಲ್ಲಿ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget