Latestಜೀವನ ಶೈಲಿ/ಆರೋಗ್ಯರಾಜ್ಯವೈರಲ್ ನ್ಯೂಸ್

ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ವಿರುದ್ಧ ವಾಟ್ಸ್‌ ಆ್ಯಪ್‌ ನಲ್ಲೂ ದೂರು ನೀಡಬಹುದು..!ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದ ಆರೋಗ್ಯ ಇಲಾಖೆ

683

ನ್ಯೂಸ್ ನಾಟೌಟ್: ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳು ನಿಮಗೆ ಸರಿಯಾಗಿ ಸಿಗುತ್ತಿಲ್ಲವಾದರೆ, ಮೊಬೈಲ್‌ ಮೂಲಕ ಒಂದು ಸಂದೇಶ ಕಳುಹಿಸಿದರೆ ಖುದ್ದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೇ ಅದಕ್ಕೆ ಸ್ಪಂದಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸರ್ಕಾರಿ ಆಸ್ಪತ್ರೆಗಳ ಕುರಿತು ಯಾವುದೇ ರೀತಿಯ ದೂರು ಅಥವಾ ಸಲಹೆಗಳಿಗೆ ವಾಟ್ಸ್‌ ಆ್ಯಪ್‌ ಸಂಖ್ಯೆಯೊಂದನ್ನು ಪರಿಚಯಿಸಿದ್ದು, ಆ ಮೂಲಕ ಸಾರ್ವಜನಿಕರು ಸರ್ಕಾರಿ ಆರೋಗ್ಯ ಸೇವೆಗಳ ಬಗ್ಗೆ ನೇರವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು, ಸಲಹೆಗಳನ್ನೂ ನೀಡಬಹುದು.

9449843001 ಮೊಬೈಲ್‌ ಸಂಖ್ಯೆಗೆ ದೂರುಗಳ ಜತೆಗೆ ಸಲಹೆಗಳನ್ನು ರೋಗಿಗಳು, ಅವರ ಸಹಾಯಕರು ಹಾಗೂ ಸಾರ್ವಜನಿಕರು ಕಳುಹಿಸಬಹುದಾಗಿದೆ. ಅಗತ್ಯವಿದ್ದರೆ, ದೂರುಗಳಿಗೆ ಸಂಬಂಧಿಸಿದ ಫೋಟೋ ಹಾಗೂ ವೀಡಿಯೋಗಳನ್ನೂ ಕಳುಹಿಸುವಂತೆ ಇಲಾಖೆ ತಿಳಿಸಿದೆ.

ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು. ವಾಟ್ಸ್‌ ಆ್ಯಪ್‌ ಸಂಖ್ಯೆ ಮೂಲಕ ಸಂದೇಶಗಳನ್ನು ಮಾತ್ರ ಸ್ವೀಕರಿಸಲಾಗುವುದು. ಕರೆಗಳಿಗೆ ಅವಕಾಶವಿಲ್ಲ ಎಂದೂ ಇಲಾಖೆ ಹೇಳಿದೆ.

‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಸಾರ್ವಜನಿಕರ ಮೇಲೆ ಪೆಟ್ರೋಲ್ ಬಾಂಬ್ ಎಸೆದ ವ್ಯಕ್ತಿ..! 6 ಜನ ಆಸ್ಪತ್ರೆಗೆ ದಾಖಲು

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ ಐ ಆರ್‌..! ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಆರೋಪ..!

See also  ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget