ಮಹಿಳೆ-ಆರೋಗ್ಯ

ಸರಕಾರಿ ಆಸ್ಪತ್ರೆಗೆ ಬರಲಿದೆ ರೋಬೋ ಡಾಕ್ಟರ್ – ಏನಿದರ ವಿಶೇಷತೆ?

348

ನ್ಯೂಸ್ ನಾಟೌಟ್ : ಸರಕಾರಿ ಆಸ್ಪತ್ರೆ ಎಂದರೆ ಸಾಕು ಜನರಲ್ಲಿ ಎನೋ ಒಂಥರ ಮುಜುಗರ. ವ್ಯವಸ್ಥೆ ಸರಿಯಿಲ್ಲ, ಫೆಸಿಲಿಟಿ ಕಮ್ಮಿ ಎಂದು ಹೇಳುವ ಕಾಲ. ಇದೀಗ ಹೊಸ ತಂತ್ರಜ್ಞಾನದ ಟೆಕ್ನಾಲಜಿಗಳು ಬೆಳೆದಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಕಾಂಪಿಟೀಶನ್ ತಕ್ಕಂತೆ ಆರೋಗ್ಯ ಇಲಾಖೆ ಕೂಡಾ ಹೆಜ್ಜೆ ಹಾಕಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ರೋಬೋಟೆಕ್ ಟೆಕ್ನಾಲಜಿ ಪರಿಚಯ ಮಾಡಿದೆ.

ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ರೋಬೋಟೆಕ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಒಂದೇ ರೂಮಿನಲ್ಲಿ ಕುಳಿತು ಹಿರಿಯ ವೈದ್ಯರು ರೋಗಿಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ನೀಡಬಹುದಾಗಿದೆ. ಇಡೀ ಐಸಿಯುನಲ್ಲಿರುವ ರೋಗಿಯ ಸ್ಥಿತಿಗತಿಗಳನ್ನು ತಿಳಿಯಬಹುದಾಗಿದೆ. ಇತರರಿಂದ ಐಸಿಯುನಲ್ಲಿರುವ ರೋಗಿಗಳು ಇನ್ಪೆಕ್ಷನ್ ಗೆ ತುತ್ತಾಗುವುದನ್ನು ತಪ್ಪಸಬಹುದಾಗಿದೆ. ಇತರ ಎಕ್ಸ್ ಪರ್ಟ್ ವೈದ್ಯರಿಂದ ಕುಳಿತಲ್ಲೇ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ. ಮೊದಲ ಹಂತದಲ್ಲಿ ಒಟ್ಟು ೨೮ ಬೆಡ್ ಗಳಿಗೆ ರೋಬೋ ಡಾಕ್ಟರ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಸೇವೆಗೆ ಸಹಾಯಕಾರಿಯಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ .ಸಿ ಎನ್ ನಾಗರಾಜ ಮಾಹಿತಿ ತಿಳಿಸಿದ್ದಾರೆ.

ಇನ್ಪೆಕ್ಷನ್ ಗಳು ಕಡಿಮೆಯಾಗಲಿದೆ, ವೈದ್ಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ರೋಬೋಟಿಕ್‌ ಟೆಕ್ನಾಲಜೆ ತುಂಬಾ ನೆರವಾಗಲಿದೆ. ಬಹು ಬೇಗ ಸರ್ಜರಿ ಮಾಡಲು ಸಹಕಾರಿಯಾಗಿದೆ. ತುರ್ತು ಚಿಕಿತ್ಸೆ ವೇಳೆ ಹೆಚ್ಚಿನ ಅನುಕೂಲ ಹಾಗೂ ರೋಗಿಯ ಸ್ಥಿತಿಗತಿ ಬಗ್ಗೆ ಬೇಗನೆ ಮಾಹಿತಿ ಕೊಡುತ್ತದೆ.

See also  ಪ್ರಸಾದ ಸೇವಿಸಿ ರಾತ್ರೋರಾತ್ರಿ ಅಸ್ವಸ್ಥರಾದ ಭಕ್ತರು..! 300 ಕ್ಕೂ ಹೆಚ್ಚು ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್..! ಏನಿದು ಘಟನೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget