ಬೆಂಗಳೂರುವೈರಲ್ ನ್ಯೂಸ್

ಸರ್ಕಾರಿ ಬಸ್​ ಚಾಲನೆ ಮಾಡುತ್ತಿರುವಾಗಲೇ ಡ್ರೈವರ್ ಹೃದಯಾಘಾತದಿಂದ ಸಾವು..! ಪ್ರಯಾಣಿಕರು ಬಚಾವಾದದ್ದೇಗೆ..?

ನ್ಯೂಸ್ ನಾಟೌಟ್: ಬಿಎಂಟಿಸಿ ಬಸ್ ​ನಲ್ಲಿ ಪ್ರಯಾಣಿಕರು ಇರುವಾಗ ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಮಂಗಲ ಟೌನ್ ಬಿನ್ನಮಂಗಲ ಬಸ್ ನಿಲ್ದಾಣದ ಬಳಿ ಇಂದು(ನ.6) ನಡೆದಿದೆ.

ಹಾಸನ ಮೂಲದ ಚಾಲಕ ಕಿರಣ್‌ ಕುಮಾರ್ (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಂದು(ನವೆಂಬರ್ 06) ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋಗೆ ಸೇರಿದ ಬಸ್ ಡ್ರೈವ್​ ಮಾಡಿಕೊಂಡು ಹೋಗುತ್ತಿರುವಾಗಲೇ ಹೃದಯಾಘಾತವಾಗಿದೆ. ಕೂಡಲೇ ಚಾಲಕ ಕಿರಣ್‌ ಕುಮಾರ್ ಬಸ್ ಅನ್ನು​ ರಸ್ತೆ ಬದಿಗೆ ಹಾಕಿ ಅಲ್ಲೇ ಪ್ರಾಣಬಿಟ್ಟ ಘಟನೆ ಕರುಣಾಜನಕವಾಗಿದೆ.

https://twitter.com/TOIBengaluru/status/1854140946457186593

ಡಿಪೋ ಸಂಖ್ಯೆ 40 ರಲ್ಲಿ ಕಳೆದ 6 ವರ್ಷದಿಂದ ಡೈವರ್ ಆಗಿ ಕೆಲಸ ಮಾಡುತ್ತಿದ್ದರು. ದುರದೃಷ್ಟವಶಾತ್ ಇಂದು ಬಸ್ ಚಾಲನೆ ಮಾಡುವಾಗಲೇ ಹೃದಯಘಾತವಾಗಿದೆ. ಕೂಡಲೇ ನಿರ್ವಾಹಕ ಒಬಳೇಶ್‌ ಸಹಾಯದಿಂದ ಚಾಲಕನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಷ್ಟರಾಗಲೇ ಕಿರಣ್‌ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ವೇಲೆ ಹಾಗೇ ಬಸ್ ರನ್ನಿಂಗ್ ನಲ್ಲಿ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಇನ್ನು ಬಸ್ ​ನಲ್ಲಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.

Click

https://newsnotout.com/2024/11/himachal-artist-kannada-news-chicken-cut-in-stage-d-fir/
https://newsnotout.com/2024/11/railway-station-kanpura-kannada-news-food/
https://newsnotout.com/2024/11/water-metro-like-kocchi-kannada-news-at-mangaluru/
https://newsnotout.com/2024/11/guruprasad-issue-actor-jaggesh-kannada-news-critics-viral-issue/
https://newsnotout.com/2024/11/kannada-news-viral-video-uncle-madya-pradesh/
https://newsnotout.com/2024/11/kannada-news-viral-video-modi-modi-siddaramayya-d/

Related posts

ಉಪ್ಪಿನಂಗಡಿ: ಸಿಬಿಐ ಆಫೀಸರ್ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ..! ಮಗನ ಹೆಸರು ಹೇಳಿ ವ್ಯಕ್ತಿಯಿಂದ ಹಣ ಸುಳಿಗೆಗೆ ಯತ್ನ..!

‘ಬಡವರಿಗೆ ವಿಸ್ಕಿ, ಬಿಯರ್ ನೀಡ್ತೇನೆ’ ಎಂದು ಆಫರ್ ಕೊಟ್ಟ ಪಕ್ಷೇತರ ಅಭ್ಯರ್ಥಿ..! ಯಾರು ಆ ಅಭ್ಯರ್ಥಿ..?

ಬಂಧನ ಭೀತಿಯಿಂದ ಕಾಡು ಸೇರಿದ ಗ್ರಾಮಸ್ಥರು..! ಅಧಿಕಾರಿಗಳು ಜನರನ್ನು ಮತ್ತೆ ಕರೆತಂದದ್ದೇಗೆ..? ಏನಿದು ಪ್ರಕರಣ..?