ನ್ಯೂಸ್ ನಾಟೌಟ್ : ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ ನೊಳಗೆ 26 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯನ್ನು ದತ್ತಾತ್ರಯ ರಾಮದಾಸ್ ಗಡೆ ಎಂದು ಗುರುತಿಸಲಾಗಿದೆ.
ಪುಣೆಯ ಜನನಿಬಿಡ ಪ್ರದೇಶ ಸ್ವಾಗೇಟ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆಯಲ್ಲದೇ, ಬಸ್ ಪೊಲೀಸ್ ಠಾಣೆಯ 100 ಮೀ. ವ್ಯಾಪ್ತಿಯಲ್ಲೇ ನಿಂತಿತ್ತು ಎನ್ನಲಾಗಿದೆ.
ಆರೋಪಿಯ ಪತ್ತೆಗಾಗಿ ಹಲವು ತಂಡಗಳ ರಚನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಬೇರೆಡೆ ನಿಂತಿದೆ ಎಂದು ಸುಳ್ಳುಹೇಳಿ, ಬೇರೆಡೆ ನಿಂತಿದ್ದ ಬಸ್ ಒಂದರೊಳಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
#WATCH | Pune, Maharashtra: Shiv Sena (UBT) leader Vasant More along with other party leaders, holds a protest at the Swargate bus stand over the alleged rape of a 26-year-old woman. pic.twitter.com/du9aQCMJyL
— ANI (@ANI) February 26, 2025
ಘಟನೆಯ ನಂತರ ಪುಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಶಿವಸೇನೆ (ಯುಬಿಟಿ) ನಾಯಕ ವಸಂತ್ ಮೋರ್ ನೇತೃತ್ವದ ಪ್ರತಿಭಟನಾಕಾರರು ಬುಧವಾರ ನಗರದ ಭದ್ರತಾ ಕಚೇರಿ ಮತ್ತು ಅಪರಾಧ ನಡೆದ ಬಸ್ ಅನ್ನು ಧ್ವಂಸಗೊಳಿಸಿದ್ದಾರೆ. ಸರ್ಕಾರ 23 ಭದ್ರತಾ ಸಿಬ್ಬಂದಿಯನ್ನು ಸಹ ಅಮಾನತುಗೊಳಿಸಿದೆ. ಸ್ವರ್ಗೇಟ್ ಬಸ್ ಡಿಪೋದಲ್ಲಿ ಕೋಪಗೊಂಡ 20ಕ್ಕೂ ಹೆಚ್ಚು ಜನರ ಗುಂಪು ಜಮಾಯಿಸಿ ಭದ್ರತಾ ಸಿಬ್ಬಂದಿ ಕುಳಿತುಕೊಳ್ಳುವ ಕ್ಯಾಬಿನ್ ನ ಗಾಜನ್ನು ಒಡೆದಿದ್ದಾರೆ.