ಕ್ರೈಂ

ಗೂನಡ್ಕ: ಹಟ್ಟಿಗೆ ನುಗ್ಗಿ 2 ಗೋವುಗಳನ್ನು ಹೊತ್ತೊಯ್ದ ಗೋ ಕಳ್ಳರು..! ರಸ್ತೆಗಳಲ್ಲಿರುವ ಹಸುಗಳಾಯ್ತು ಇದೀಗ ಮನೆಯ ಹಟ್ಟಿಗೇ ನುಗ್ಗುತ್ತಿರುವ ಕಿರಾತಕರು..! ಕಪ್ಪು ಸ್ಕಾರ್ಫಿಯೋ ಮೇಲೆ ಶಂಕೆ

132

ನ್ಯೂಸ್ ನಾಟೌಟ್: ಗೂನಡ್ಕ ಸಮೀಪದ ಪೆಲ್ತಡ್ಕ ಎಂಬಲ್ಲಿ ಕಳೆದೊಂದು ತಿಂಗಳಲ್ಲಿ ಸತತ ಎರಡು ಸಲ ಹಟ್ಟಿಗೆ ನುಗ್ಗಿ ದುಷ್ಕರ್ಮಿಗಳು ಗೋವುಗಳನ್ನು ಕದ್ದೊಯ್ದ ಘಟನೆ ಇದೀಗ ವರದಿಯಾಗಿದೆ.

ಭಾನುವಾರ ತಡರಾತ್ರಿ ಹಟ್ಟಿಗೆ ನುಗ್ಗಿರುವ ಗೋ ಕಳ್ಳರು ಬೆಳ್ ಬೆಳಗ್ಗೆ ಸುಮಾರು ನಾಲ್ಕು ಗಂಟೆ ಸುಮಾರಿಗೆ ಪದ್ಮನಾಭ ಎಂಬುವವರ ದನದ ಹಟ್ಟಿಗೆ ನುಗ್ಗಿ ಕಿರಾತಕರು ಎರಡು ಗೋವುಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ರಸ್ತೆಗಳಲ್ಲಿ ಇದ್ದ ಗೋವುಗಳನ್ನು ಕಪ್ಪು ಬಣ್ಣದ ಸ್ಕಾರ್ಫಿಯೋ ಕಾರಿನಲ್ಲಿ ದುಷ್ಕರ್ಮಿಗಳು ಬಂದು ಮತ್ತು ಬರುವ ಔಷಧಿ ನೀಡಿ ಹೊತ್ತೊಯ್ದ ಸಿಟಿಟಿವಿ ವಿಡಿಯೋಗಳು ಕೆಲವು ತಿಂಗಳ ಹಿಂದೆ ವೈರಲ್ ಆಗಿದ್ದವು. ಈ ಸ್ಕಾರ್ಫಿಯೋ ಕಾರು ಗೋವು ಕದಿಯುವುದಕ್ಕೇ ಬಳಸಲಾಗುತ್ತಿದೆ. ಈ ಕಾರು ತಡರಾತ್ರಿ ಕಂಡು ಬಂದರೆ ಹಿಡಿದು ಬೆಂಡೆತ್ತುವುದಕ್ಕೆ ಹಲವು ಸಲ ಪ್ರಯತ್ನ ನಡೆಸಲಾಗಿದೆ. ಆದರೆ ವಿಫಲವಾಗಿದೆ.

See also  ಪಹಲ್ಗಾಮ್ ದಾಳಿಗೂ ಮುನ್ನ ಅಮೆರಿಕದಿಂದ 3 ಲಕ್ಷಕ್ಕೆ ರೂ.ಗೆ ಸ್ಯಾಟ್‌ ಲೈಟ್ ಚಿತ್ರ ಪಡೆದಿದ್ದ ಉಗ್ರರು..? ರಹಸ್ಯ ಮಾಹಿತಿ ಬಯಲು..!
  Ad Widget   Ad Widget     Ad Widget   Ad Widget   Ad Widget   Ad Widget