ಕರಾವಳಿವೈರಲ್ ನ್ಯೂಸ್ಸುಳ್ಯ

ಗೂನಡ್ಕ: ಸ್ಕೂಟಿ ಕದ್ದು ಬಂದವ ಹೋಟೆಲ್ ಶೌಚಾಲಯದಲ್ಲಿ ಗಡದ್ ನಿದ್ರೆಗೆ ಜಾರಿದ..!

381

ನ್ಯೂಸ್ ನಾಟೌಟ್: ವಾಹನ ಕದ್ದು ಪರಾರಿಯಾಗುತ್ತಿದ್ದ ಕಳ್ಳನೊಬ್ಬ ಗೂನಡ್ಕ ಸಮೀಪದ ದೊಡ್ಡಡ್ಕದ ಹೋಟೆಲ್‌ವೊಂದರಲ್ಲಿ ಭರ್ಜರಿ ನಿದ್ದೆ ಮಾಡಿದ ಘಟನೆ ನಡೆದಿದೆ. ಕಳ್ಳನ ವಿಚಿತ್ರ ನಿದ್ದೆ ಕಂಡು ಅನುಮಾನಗೊಂಡ ಹೋಟೆಲ್‌ನವರು ಪೊಲೀಸರಿಗೆ ಮಾಹಿತಿ ನೀಡಿ ಕಳ್ಳನ ಚಳಿ ಬಿಡಿಸಿದ್ದಾರೆ.

ಉಡುಪಿಯ ಕಾಪುವಿನಲ್ಲಿ ಸ್ಕೂಟಿಯೊಂದು ಕಳ್ಳತನ ಆಗಿದೆ. ಕದ್ದ ಸ್ಕೂಟಿಯೊಂದಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಗೂನಡ್ಕದ ದೊಡ್ಡಡ್ಕದಲ್ಲಿನ ಹೋಟೆಲ್‌ಗೆ ಕಳ್ಳ ಹೋಗಿದ್ದಾನೆ. ಈ ವೇಳೆ ಶೌಚಾಲಯಕ್ಕೆ ಹೋದ ಕಳ್ಳ ಅಲ್ಲಿಯೇ ನಿದ್ದೆಗೆ ಜಾರಿದ್ದಾನೆ. ಒಳಗೆ ಹೋಗಿ ಅರ್ಧ ಗಂಟೆಯಾದರೂ ಹೊರಗೆ ಏಕೆ ಬಂದಿಲ್ಲ? ಎಂದು ಅನುಮಾನಗೊಂಡು ಹೋಟೆಲ್‌ನವರು ಹೋಗಿ ಪರಿಶೀಲನೆ ನಡೆಸಿದಾಗ ಕಳ್ಳ ಭರ್ಜರಿ ನಿದ್ರೆಗೆ ಜಾರಿದ್ದು ಕಂಡು ಬಂದಿದೆ. ತಕ್ಷಣ ಆತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈತ ಮತ್ತೆ ಸ್ಕೂಟಿ ಏರಿ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಪೊಲೀಸರು ಕಲ್ಲುಗುಂಡಿಯಲ್ಲಿ ತಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ತಕ್ಷಣ ಕಾಪು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕಾಪು ಪೊಲೀಸರು ಬಂದು ಸ್ಕೂಟಿಯನ್ನುಹಾಗೂ ಕಳ್ಳನನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

See also  ವಯನಾಡು ಗುಡ್ಡ ಕುಸಿತ: ಸಾವಿನ ಸಂಖ್ಯೆ 275ಕ್ಕೆ ಏರಿಕೆ, 240 ಮಂದಿ ನಾಪತ್ತೆ..! ಕನ್ನಡಿಗರ ರಕ್ಷಣೆಗೆ ವಯಾನಾಡಿಗೆ ತೆರಳಿದ ಸಚಿವ ಸಂತೋಷ್ ಲಾಡ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget