ಕರಾವಳಿಸುಳ್ಯ

ಗೂನಡ್ಕ : ಅಬ್ಬಬ್ಬಾ..!ಮನೆಯ ಟೀಪಾಯಿಯಡಿಯಲ್ಲಿ ಅವಿತು ಕುಳಿತಿದ್ದ ಬೃಹತ್ ಗಾತ್ರದ ಕಾಳಿಂಗ..!,ಮನೆಯೊಳಗೆ ಸರ್ಪ ಬಂದಿದ್ದೇಗೆ?

285

ನ್ಯೂಸ್ ನಾಟೌಟ್ : ಬೃಹತ್ ಗಾತ್ರದ  ಕಾಳಿಂಗ ಸರ್ಪ ನಿಮ್ಮ ಮನೆಯೊಳಗೆ ಬಂದು ಬೆಚ್ಚಗೆ ಬಚ್ಚಿಟ್ಟುಕೊಂಡರೆ..!ಹೌದು, ಈ ಸುದ್ದಿಯನ್ನು ಊಹೆ ಮಾಡಿಕೊಳ್ಳೋದಕ್ಕು ಕಷ್ಟವಾಗುತ್ತಲ್ವ? ಮೈಯೆಲ್ಲ ನಡುಕ ಬಂದಂತೆ ಭಾಸವಾಗುತ್ತದಲ್ವ? ಆದರೆ ಇಂಥದ್ದೇ ಒಂದು ಘಟನೆ ಸುಳ್ಯದ ಗೂನಡ್ಕ ಎಂಬಲ್ಲಿಂದ ವರದಿಯಾಗಿದೆ.

ಗೂನಡ್ಕದ ಪೆಲತ್ತಡ್ಕದ ಸನತ್ ಎಸ್.ಪಿ.ಯವರ ಮನೆಯೊಳಗೆ ಕಾಳಿಂಗ ಸರ್ಪ ಪ್ರವೇಶ ಮಾಡಿದ್ದು, ಮನೆಯ ಟೀಪಾಯಿಯಲ್ಲಿ ಬೆಚ್ಚಗೆ ಅಡಗಿ ಕುಳಿತಿದೆ.ಈ ವೇಳೆ ಬುಸ್ ಬುಸ್ ಎನ್ನುವ ಶಬ್ಧ ಕೇಳಿಸಿಕೊಂಡ ಮನೆಯವರಿಗೆ ಏನಿದು ಸೌಂಡ್ ಎಂದು ಮನೆ ಒಳಗೆ, ಹೊರಗೆ ಹುಡುಕಾಟ ನಡೆಸೋದಕ್ಕೆ ಆರಂಭಿಸಿದ್ದಾರೆ. ಕೊನೆಗೂ ಹೇಗೋ ಮನೆಯವರ ಕಣ್ಣಿಗೆ ಈ ಸರ್ಪ ಸಿಕ್ಕಿಬಿದ್ದಿದೆ.

ಸುಮಾರು ಮಧ್ಯಾಹ್ನದ ವೇಳೆ ಈ ಘಟನೆ ಸಂಭವಿಸಿದ್ದು,ಕಾಳಿಂಗ ಸರ್ಪವನ್ನು ನೋಡಿ ಮನೆಯವರು ಹೌಹಾರಿದರು. ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಇಲಾಖೆಯವರು ಸ್ನೇಕ್ ಮೋಹನ್ ಅವರಿಗೆ ವಿಷಯ ತಿಳಿಸಿದ್ದು, ಅವರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಮನೆಯೊಳಗಿದ್ದ ಹಾವನ್ನು ಹಿಡಿದು ಅರಣ್ಯ ಇಲಾಖೆಯವರಿಗೆ ನೀಡಲಾಯಿತೆಂದು ತಿಳಿದುಬಂದಿದೆ.ನಂತರ ಸುರಕ್ಷಿತವಾಗಿ ಅದನ್ನು ಕಾಡಿಗೆ ಬಿಡಲಾಯಿತು ಎಂದು ತಿಳಿದು ಬಂದಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇

https://www.facebook.com/NewsNotOut2023/videos/746971337194551/?extid=CL-UNK-UNK-UNK-AN_GK0T-GK1C&mibextid=NnVzG8

See also  ಕಡಬ: 800 ವರ್ಷದ ಹಿಂದಿನ ಕನ್ನಡ ಶಿಲಾ ಶಾಸನ ಪತ್ತೆ, ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿದೆ 'ತುಳು ರಾಜ್ಯ' ಎಂಬ ಉಲ್ಲೇಖ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget