Latestಕರಾವಳಿವೈರಲ್ ನ್ಯೂಸ್

ಗೂಗಲ್​ ಮ್ಯಾಪ್​ ನಂಬಿ ಫ್ಲೈಓವರ್​ ಮೇಲೆ ಅಪಾಯಕ್ಕೆ ಸಿಲುಕಿದ ಕಾರು..! ಪ್ರಾಣಾಪಾಯದಿಂದ ಪಾರಾಗಿದ್ದೇ ಪವಾಡ..!

484

ನ್ಯೂಸ್‌ ನಾಟೌಟ್‌: ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಗೂಗಲ್​ ಮ್ಯಾಪ್​ ಬಳಕೆ ಮಾಡಿ, ತಮ್ಮೂರನ್ನು ಸೇರಲು ಮ್ಯಾಪ್​ ತೋರಿದ ಮಾರ್ಗವನ್ನು ಅನುಸರಿಸಿದ್ದಾರೆ. ಕಾಮಗಾರಿ ನಡೆಯುತ್ತಿದ್ದ ಫ್ಲೈ ಓವರ್​ ಮೇಲೆ ಇವರ ಕಾರು ಸಾಗಿದೆ. ಇದು ಇದ್ದಕ್ಕಿದ್ದಂತೆ ರಸ್ತೆ ಅಂತ್ಯವಾಗಿ ಕಾರು ನಿಯಂತ್ರಣ ಸಿಗದೆ ಗುಂಡಿಗೆ ಬಿದ್ದು ಅಪಘಾತಕ್ಕೆ ಒಳಗಾಗಿದೆ.

ಉತ್ತರಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಭಯ್ಯಾ ಫರೆಂಡಾದಲ್ಲಿ ಈ ಅಪಘಾತ ಸಂಭವಿಸಿದೆ. ಭಾರತ ಮತ್ತು ನೇಪಾಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 24 (ಗೋರಖ್‌ಪುರ-ಸೋನೌಲಿ ರಸ್ತೆ) ರಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಫ್ಲೈ ಓವರ್​ ಮೇಲೆ ಕಾರು ತೆರಳುತ್ತಿತ್ತು.

ಫ್ಲೈಓವರ್ ನಿರ್ಮಾಣ ಕಾರ್ಯ ಸದ್ಯ ಪ್ರಗತಿಯಲ್ಲಿದೆ. ಸ್ಥಳೀಯ ಜನರ ಪ್ರಕಾರ, ಫ್ಲೈಓವರ್‌ ನ ಒಂದು ಭಾಗವು ಪೂರ್ಣಗೊಂಡಿದೆ. ಫ್ಲೈಓವರ್‌ ರಸ್ತೆ ಸಾಮಾನ್ಯ ಮತ್ತು ಬಳಕೆಗೆ ಯೋಗ್ಯವಾಗಿ ಕಂಡಿದೆ. ಆದರೆ, ಫ್ಲೈಓವರ್‌ನ ಇನ್ನೊಂದು ಬದಿಯು ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ರಾತ್ರಿಯ ಕತ್ತಲೆಯಲ್ಲಿ ಈ ಕುರಿತು ಎಚ್ಚರಿಕೆಯ ಯಾವುದೇ ಬೋರ್ಡ್​ ಗಳು ಸೂಚನೆಗಳು ಇಲ್ಲದೇ ಇರುವುದರಿಂದ ಈ ರೀತಿ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ.

ಜಿಲ್ಲಾಡಳಿತ ಈ ಅಪಘಾತ ಪ್ರಕರಣ ಕುರಿತು ತನಿಖೆ ಮಾಡುವಂತೆ ಆದೇಶಿಸಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ಈ ನಡುವೆ ಫರೆಂಡ ಪೊಲೀಸ್​ ಠಾಣೆಯ ಉಸ್ತುವಾರಿ ಪ್ರಶಾಂತ್​ ಪಾಠಕ್​ ಮಾತನಾಡಿ​, ಬೆಳಗ್ಗೆ ಈ ಕುರಿತು ಮಾಹಿತಿ ಲಭ್ಯವಾಗಿದೆ. ಪೊಲೀಸರು ಬರುವ ಹೊತ್ತಿಗೆ ಕಾರನ್ನು ಕ್ರೇನ್​ ಸಹಾಯದಿಂದ ಕೆಳಗೆ ಇಳಹಿಸಲಾಗಿತ್ತು, ಸಣ್ಣ ಪುಟ್ಟ ಗಾಯಗಳೊಂದಿಗೆ ಅವರನ್ನು ರಕ್ಷಿಸಲಾಗಿದೆ ಎಂದಿದ್ದಾರೆ.

ಲಿವ್-ಇನ್ ಸಂಬಂಧದಲ್ಲಿದ್ದ ಮಗಳನ್ನು ಕೊಂದು ಕಾಡಿನಲ್ಲಿ ಬೆಂಕಿ ಹಚ್ಚಿದ ತಂದೆ..! ಪೊಲೀಸರ ಕಾರ್ಯಾಚರಣೆಯಲ್ಲಿ ಗೊತ್ತಾದದ್ದೇನು..?

See also  ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರನ್ನು ಹತ್ಯೆ ಮಾಡಿದ ಬಿಎಸ್‌ ಎಫ್‌ ಯೋಧರು..! ಚೀನಾ ನಿರ್ಮಿತ ಕ್ಷಿಪಣಿಯ ಅವಶೇಷ ಪತ್ತೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget