ನ್ಯೂಸ್ ನಾಟೌಟ್: ಉತ್ತರಕನ್ನಡ ಜಿಲ್ಲೆಯಲ್ಲಿ ಚಾರಣ ನಡೆಸೋರಿಗೆ ಗುಡ್ ನ್ಯೂಸ್ . ಚಾರಣ ಪ್ರಿಯರ ಆಸೆ ನೆರವೇರಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತದಿಂದ ಹೊಸ ಪ್ರಯತ್ನ. ನಿಸರ್ಗ ಪ್ರೇಮಿಗಳನ್ನು ಇನ್ನಷ್ಟು ಆಕರ್ಷಿಸುವ ಉದ್ದೇಶದಿಂದ 32 ಸ್ಥಳಗಳಲ್ಲಿ ಟ್ರೆಕ್ಕಿಂಗ್ ಅವಕಾಶಕ್ಕಾಗಿ PCCF ಗೆ ಉತ್ತರಕನ್ನಡ ಅರಣ್ಯ ಇಲಾಖೆಯ ಅಧಿಕಾರಿ ವರದಿ ಸಲ್ಲಿಸಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಬಳಿಕ 32 ಸ್ಥಳಗಳಲ್ಲಿ ಚಾರಣಕ್ಕೆ ಅವಕಾಶ ದೊರೆಯಲಿದೆ.ಕೆಲವೇ ದಿನಗಳಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ 32 ಸುಂದರ ಮತ್ತು ಸುರಕ್ಷಿತ ಟ್ರೆಕ್ಕಿಂಗ್ ಸ್ಥಳಗಳಿದ್ದು, ಈವರೆಗೂ ಕಾಣದ ಪ್ರದೇಶಗಳನ್ನು ಇನ್ಮುಂದೆ ಸುರಕ್ಷಿತವಾಗಿ ಕಾಣಬಹುದಾಗಿದೆ, ಜತೆಗೆ ಪ್ರತಿಯೊಂದು ಟ್ರೆಕ್ಕಿಂಗ್ ಸ್ಥಳಗಳನ್ನುಅರಣ್ಯ ಇಲಾಖೆಯವರೇ ನಿರ್ವಹಣೆ ಮಾಡಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಶೇ. 72ರಷ್ಟು ಕಾಡು ಇದ್ರೂ ಈವರೆಗೆ ಅಧಿಕೃತವಾಗಿ ಒಂದೇ ಚಾರಣ ಪಥ ಇತ್ತು. ಕುಳಗಿ ನೇಚರ್ ಕ್ಯಾಂಪ್ ನಲ್ಲಿ ಮಾತ್ರ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಹಳಷ್ಟು ಪ್ರವಾಸಿಗರು ಇಲಾಖೆಯ ಕಣ್ತಪ್ಪಿಸಿ ಚಾರಣ ಮಾಡಿ ಅವಘಡಕ್ಕೆ ಸಾಕ್ಷಿಯಾಗಿದ್ರು. ಉತ್ತರಕನ್ನಡ ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಸರ್ವೆ ಮಾಡಿ 32 ಚಾರಣ ಪಥಗಳ ಗುರುತು ನಡೆಯಲಿದ್ದು, ಬಳಿಕ ಜಿಲ್ಲೆಯ ಸಮೃದ್ಧವಾದ ನಿಸರ್ಗ ತಾಣಗಳನ್ನು ಚಾರಣಪ್ರಿಯರು ಸುರಕ್ಷಿತವಾಗಿ ಕಾಣಬಹುದಾಗಿದೆ.