ಕರಾವಳಿ

ಹೋಟೆಲ್ ಮಾಲೀಕರಿಗೆ ಸಿಹಿ ಸುದ್ದಿ, ಸಿಲಿಂಡರ್​ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ, ಕಳೆದೊಂದು ತಿಂಗಳಿನಲ್ಲಿ ಇಳಿಕೆಯಾಗಿದ್ದೆಷ್ಟು ಗೊತ್ತಾ..?

ನ್ಯೂಸ್‌ ನಾಟೌಟ್‌: 19 ಕೆ.ಜಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್​ ಬೆಲೆ 83 ರೂ. ನಷ್ಟು ಇಳಿಕೆಯಾಗಿದೆ. ಇದರಿಂದ ಹೋಟೆಲ್ ಮಾಲೀಕರು ಸೇರಿದಂತೆ ಗ್ರಾಹಕರು ತುಸು ಸಮಾಧಾನ ಪಡುವಂತಾಗಿದೆ.

ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳಿಗೆ ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ತಿಳಿಸಿವೆ. ಅಂದರೆ 14.2 ಕೆ.ಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ. ಏತನ್ಮಧ್ಯೆ, ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ.ಕಳೆದ ತಿಂಗಳು ಸಹ ಸಿಲಿಂಡರ್ ಬೆಲೆ 172 ರೂ.ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 83 ರೂ.ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗೆ ಸಿಲಿಂಡರ್ ಬೆಲೆ 250 ರೂ.ನಷ್ಟು ಕಡಿಮೆಯಾಗಿದೆ ಎನ್ನಬಹುದು. ಈಗಾಗಲೇ ವಾಣಿಜ್ಯ ಸಿಲಿಂಡರ್ ಬೆಲೆ 1,856.50 ರೂ. ನಷ್ಟಿತ್ತು. ಇದೀಗ 1,773 ರೂ.ಗೆ ಇಳಿಕೆಯಾಗಿದೆ.

Related posts

ಸುಳ್ಯ ಮೂಲದ ಪೊಲೀಸ್‌ ಇನ್ಸ್ ಪೆಕ್ಟರ್ ಅಮಾನತು

ಆಗುಂಬೆ ಘಾಟ್ ನಲ್ಲಿ ಬಸ್‌-ಬೈಕ್‌ ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಯುವತಿ ಗಂಭೀರ

ಮಡಿಕೇರಿ: ಮಿತಿಮೀರಿದ ಕಾಡಾನೆ ಹಾವಳಿ, ಭಯದ ನೆರಳಲ್ಲಿ ಶಾಲಾ ಮಕ್ಕಳು, ಪೋಷಕರು..! ಶಾಲಾ ಮಕ್ಕಳನ್ನು ತಮ್ಮ ವಾಹನದಲ್ಲೇ ಮನೆಮನೆಗೆ ತಲುಪಿಸಿದ ಅರಣ್ಯ ಇಲಾಖೆ