ಬೆಂಗಳೂರು

ರಿಕ್ಷಾ ಚಾಲಕರೇ, ರಾತ್ರಿ ಹೊತ್ತಲ್ಲಿ ಬಾಲ ಬಿಚ್ಚಿದ್ರೆ ಜೋಕೆ..! ಮಹಿಳೆಯರ ರಕ್ಷಣೆಗಾಗಿ ಬಂದಿದೆ ಹೊಸ ಅಸ್ತ್ರ..! ಅದೇನದು ಗೊತ್ತಾ?

ನ್ಯೂಸ್ ನಾಟೌಟ್‌ : ಮಹಿಳೆಯರಿಗೆ ಅಲ್ಲಲ್ಲಿ ತೊಂದರೆಯಾಗುತ್ತಿರೋದನ್ನು ಮನಗಂಡು ಜಬರ್‌ದಸ್ತ್‌ ಪ್ಲ್ಯಾನ್ ಒಂದನ್ನು ಹುಡುಕಲಾಗಿದೆ. ವಿಶೇಷವಾಗಿ ಮಧ್ಯರಾತ್ರಿ ಬಾಲ ಬಿಚ್ಚೋ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಲು ಪೊಲೀಸ್​​ ಇಲಾಖೆ ಸಖತ್​ ಪ್ಲಾನ್​ ಮಾಡಿದೆ. ಆ ಮೂಲಕ ರಾತ್ರಿ ಹೊತ್ತು ಒಂಟಿಯಾಗಿ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಗುಡ್​ ನ್ಯೂಸ್ ಕೊಟ್ಟಿದೆ. ರಿಕ್ಷಾದಲ್ಲಿ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಯುಪಿಸ್ ನಂಬರ್ ತಕ್ಷಣ ಹೆಲ್ಪ್​ ಮಾಡಲಿದೆ.

ರಾತ್ರಿಯಾದ್ರೆ ಸಾಕು ಮೆಜೆಸ್ಟಿಕ್ ಸುತ್ತ ಮುತ್ತ ಆಟೋದಲ್ಲಿ ಓಡಾಡೋಕೆ ಹೆಣ್ಣು ಮಕ್ಕಳು ಭಯ ಪಡುತ್ತಿದ್ದರು. ಮಿಡ್ ನೈಟ್ ನಲ್ಲಿ ಆಟೋದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಕೆಲ ಆಟೋ ಚಾಲಕರು ಕಿರುಕುಳ, ಒಡವೆ ಕಸಿಯೋದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ಕೊಡುತ್ತಿದ್ದರು. ಆದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಡಿಪಾರ್ಟ್ಮೆಂಟ್‌ಗೆ ಬಾರಿ ತಲೆ ನೋವು ಪರಿಣಮಿಸಿತ್ತು.ಈ ಬಗ್ಗೆ ದೂರು ನೀಡಿದ್ರೂ ಕೂಡ ಪತ್ತೆ ಹಚ್ಚೋದಕ್ಕೆ ಕಷ್ಟ ಸಾದ್ಯವಾಗುತ್ತಿತ್ತು.ಮಾತ್ರವಲ್ಲದೇ ಇಂತಹ ದೂರುಗಳು ದಿನದಲ್ಲಿ ಅದೆಷ್ಟೋ ಮಹಿಳೆಯರು ನೀಡುತ್ತಿದ್ದರು.

ಇದರಿಂದಾಗಿ ಯಾವ ಆಟೋ ಚಾಲಕ ತೊಂದರೆ ಕೊಟ್ಟ ಅನ್ನೋದನ್ನ ಪತ್ತೆ ಹಚ್ಚೋದೆ ಪೊಲೀಸರಿಗೆ ಚಾಲೆಂಜ್ ಆಗಿತ್ತು.ಪ್ರಯಾಣಿಕರು ಆಟೋ ನಂಬರನ್ನ ಕರೆಕ್ಟಾಗಿ ನೆನೆಪಿಟ್ಟುಕೊಳ್ಳುವಲ್ಲಿ ಎಡವುತ್ತಿದ್ರು. ಕತ್ತಲಲ್ಲಿ ತೊಂದ್ರೆ ಕೊಟ್ಟ ಆಟೋ ಚಾಲಕರು ಎಸ್ಕೇಪ್ ಆಗುತ್ತಿದ್ರು. ಇದೀಗ ಅವುಗಳಿಗೆ ಬ್ರೇಕ್ ಹಾಕಲು ಪೊಲೀಸರು ಯುಪಿಎಸ್ ಅಸ್ತ್ರ ಪ್ರಯೋಗಿಸಿದ್ದಾರೆ. ಮೆಜೆಸ್ಟಿಕ್ ಸುತ್ತ ಮುತ್ತ ಅಂದರೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೇ ಸ್ಟೇಷನ್ ಮತ್ತು ಆಟೋ ಸ್ಟ್ಯಾಂಡ್ ನಲ್ಲಿ  ಹೈ ಅಲರ್ಟ್ ಮಾಡಲಾಗಿದೆ. ಒಂದು ವೇಳೆ ಮಹಿಳೆಯರಿಗೆ ತೊಂದರೆ ಕೊಟ್ರೆ ಹೆಡೆಮುರಿಕಟ್ಟುವುದಾಗಿ ಎಚ್ಚರಿಸಿದ್ದಾರೆ.

ಮೆಜೆಸ್ಟಿಕ್ ಸುತ್ತ ಮುತ್ತಲ ಆಟೋ ಡ್ರೈವರ್ ಗಳಿಗೆ ಯುಪಿಎಸ್ ನಂಬರ್ ಕೊಡಲಾಗಿದೆ. ಸ್ಥಳೀಯ ಠಾಣೆಯಲ್ಲಿ ಆಟೋ ಚಾಲಕರ ಸಂಪೂರ್ಣ ಮಾಹಿತಿ ಪಡೆದುಕೊಂಡು ನಂತರ ಅಂತಹ ಆಟೋ ಚಾಲಕರಿಗೆ ಯುಪಿಎಸ್ ನಂಬರ್ ನೀಡಲಾಗಿದೆ. ಚಾಲಕರು ಆ ಯುಪಿಎಸ್ ನಂಬರನ್ನ ಪ್ರಯಾಣಿಕರಿಗೆ ಕಾಣುವಂತೆ ಹಾಕಬೇಕು. ಆಟೋದ ಮುಂಭಾಗ ಹಾಗೂ ಹಿಂಭಾಗದಲ್ಲಿ ಹಾಕಬೇಕು. ಯುಪಿಎಸ್ ನಂಬರ್ 2-3 ಡಿಜಿಟ್ ಇರೋದರಿಂದ ನೆನೆಪಿಟ್ಟುಕೊಳ್ಳೋದು ಸುಲಭವಾಗಿದೆ.

ಮಹಿಳೆಯರು ರಾತ್ರಿ ಹೊತ್ತು ಮೆಜೆಸ್ಟಿಕ್ ನಲ್ಲಿ ಇಂತಹ ಯುಪಿಎಸ್ ನಂಬರ್ ಇರೋ ಆಟೋ ಹತ್ತೋದು ಸುರಕ್ಷಿತ. ಏನಾದ್ರೂ ಪ್ರಯಾಣದ ವೇಳೆ ತೊಂದ್ರೆಯಾದ್ರೆ ಪೊಲೀಸರಿಗೆ ಈ ಯುಪಿಎಸ್ ನಂಬರ್ ಹೇಳಿದ್ರೆ ಸಾಕು. ಕ್ಷಣಮಾತ್ರದಲ್ಲಿಯೇ ಆ ಆಟೋ ಚಾಲಕನ ಸಂಪೂರ್ಣ ಜಾತಕ ತೆರೆದುಕೊಳ್ಳಲಿದೆ. ಮಾತ್ರವಲ್ಲದೆ, ಕಿಡಿಗೇಡಿತನ ಪ್ರದರ್ಶನ ಮಾಡಿದ ಆಟೋ ಚಾಲಕರನ್ನ ಪತ್ತೆ ಹಚ್ಚೋದು ಪೊಲೀಸರಿಗೆ ಸುಲಭವಾಗಲಿದೆ.

https://www.youtube.com/watch?v=1JnHTxLJRGA

Related posts

ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌, ವಾಹನ ಚಲಾಯಿಸಿದ ಟ್ಯಾಕ್ಸಿ ಬುಕ್ ಮಾಡಿದ್ದ ಪ್ರಯಾಣಿಕ..! ಇಲ್ಲಿದೆ ವೈರಲ್ ವಿಡಿಯೋ

ಸಾಣೂರು ಕೆರೆಗೆ ಜೀವ ತುಂಬಿದ ಕಾರ್ಕಳದ ಜನಪ್ರಿಯ ನಾಯಕ

ಕಾರ್ಕಳದಲ್ಲಿಸುನಿಲ್ ಕುಮಾರ್ v/s ಉದಯಕುಮಾರ್, ಈ ಸಲ ವಿಜಯದ ಪಟ್ಟ ಯಾರಿಗೆ? ಜನ ಏನು ಹೇಳಿದ್ರು? ನ್ಯೂಸ್ ನಾಟೌಟ್ ಫೀಲ್ಡ್‌ ರಿಪೋರ್ಟ್‌