ನ್ಯೂಸ್ ನಾಟೌಟ್: ಜೆಸಿಐ ವಲಯ ತರಬೇತುದಾರರಾಗಿ ಗುರುತಿಸಿಕೊಂಡು ಜನಮನ್ನಣೆಗಳಿಸಿದ್ದ ಖ್ಯಾತ ನಿರೂಪಕ,ಯುವ ಪ್ರಭಾರ ಮುಖ್ಯೋಪಾಧ್ಯಾಯ 42 ವರ್ಷದ ಉತ್ಸಾಹಿ ಪ್ರದೀಪ್ ಬಾಕಿಲ ಹಠಾತ್ ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಜೆಸಿಐ ಪೂರ್ವ ವಲಯ ಉಪಾಧ್ಯಕ್ಷರಾಗಿ ಸತತ 25 ಗಂಟೆ ತರಬೇತಿ ನೀಡಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ಪ್ರಶಸ್ತಿಗೆ ಭಾಗಿಯಾಗಿದ್ದರು. ಡಿ.5 ರಂದು ಪ್ರದೀಪ್ ಬಾಕಿಲ ಮನೆಯ ಅಂಗಳದಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದು ಬರಬೇಕಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಹೃದಯಾಘಾತದಂತಹ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿರುವುದು ಕಳವಳಕಾರಿಯಾಗಿರುವ ವಿಚಾರವಾಗಿದೆ. ಪ್ರದೀಪ್ ಅವರು ಕಡಬ ತಾಲೂಕಿನ ಗೋಳಿತೊಟ್ಟು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು.