ಕ್ರೈಂ

ಗೋಳಿತೊಟ್ಟು: ಟಿಪ್ಪರ್-ಬೈಕ್ ಡಿಕ್ಕಿ, ತಾಯಿ-ಮಗನಿಗೆ ಗಂಭೀರ ಗಾಯ

98
Spread the love

ನ್ಯೂಸ್ ನಾಟೌಟ್ :  ನೆಲ್ಯಾಡಿ ಸಮೀಪದ  ಕಾಂಚನ – ಶಾಂತಿನಗರ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಗೋಳಿತ್ತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಸ್ಕೂಟಿಯಲ್ಲಿದ್ದ ತಾಯಿ ಹಾಗೂ ಮಗ ಗಾಯಗೊಂಡಿದ್ದಾರೆ. ಆ.25 ರಂದು ಮಧ್ಯಾಹ್ನ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ನೂಜೋಲು ನಿವಾಸಿ ಕುಶಾಲಪ್ಪ ಹಾಗೂ ಅವರ ತಾಯಿ ಉಪ್ಪಿನಂಗಡಿಯಿಂದ ಸ್ಕೂಟಿಯಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಟಿಪ್ಪರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ . ಘಟನೆಯಲ್ಲಿ ಟಿಪ್ಪರ್ ಅಡಿಗೆ ಬಿದ್ದಿದ್ದ ಕುಶಾಲಪ್ಪ ಹಾಗೂ ಅವರ ತಾಯಿ ಯನ್ನು ಕಷ್ಟಪಟ್ಟು ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.

See also  ಅಪ್ಪ-ಅಮ್ಮನ ಮೇಲಿನ ಕೋಪಕ್ಕೆ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ ಬಾಲಕಿಯರು!ಹೈಸ್ಕೂಲ್ ಹುಡುಗಿಯರ ಕೆಲಸಕ್ಕೆ ಪೋಷಕರ ಪರದಾಟ.!
  Ad Widget   Ad Widget   Ad Widget