ಕರಾವಳಿ

ಗೋಳಿತ್ತೊಟ್ಟು: ಮದ್ಯದಂಗಡಿ ಗಲಾಟೆ, ಹೊಸ ಬಾರ್ ಆರಂಭಕ್ಕೆ ಸ್ಥಳೀಯರ ವಿರೋಧ

ಗೋಳಿತ್ತೊಟ್ಟು: ಇಲ್ಲಿನ ಸಮರ ಗುಂಡಿ ಎಂಬಲ್ಲಿ ತಲೆ ಎತ್ತಿರುವ ಬಾರ್ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾರ್ ತೆರೆಯುವುದನ್ನು ಖಂಡಿಸಿರುವ ಅಕ್ಕಪಕ್ಕದ ಮನೆಯವರು ಇದೀಗ ಪ್ರತಿಭಟನೆಗಾಗಿ ಬೀದಿಗಿಳಿದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಗೋಳಿತೊಟ್ಟಿನ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸಮರ ಗುಂಡಿ ಎಂಬಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿವೆ. ಕೃಷಿ ಚಟುವಟಿಕೆಯ ತಾಣವಾಗಿರುವ ಹಾಗೂ ಅಂಗನವಾಡಿ, ಮದರಸ ಇರುವಂತಹ ಸ್ಥಳದಲ್ಲಿ ಬಾರ್ ವೊಂದು ಇದ್ದಕ್ಕಿದ್ದಂತೆ ತಲೆ ಎತ್ತಿದೆ.

ಇದರಿಂದ ಸ್ಥಳೀಯರಿಗೆ ಅನೇಕ ಸಮಸ್ಯೆಗಳಾಗುತ್ತಿವೆ ಅನ್ನುವ ದೂರುಗಳು ಕೇಳಿ ಬರುತ್ತಿವೆ. ಕೂಡಲೇ ಬಾರ್ ಅನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

ಆಗುಂಬೆ ಘಾಟಿಯಲ್ಲಿ ಬೃಹತ್ ಮರ ಬಿದ್ದು ವಾಹನ ಸಂಚಾರ ಸ್ಥಗಿತ..! ಒಮ್ನಿ ಕಾರು ಜಖಂ..! 

ವಿವಾಹಿತ ಮಹಿಳೆ ದಿಢೀರ್‌ ಅಸ್ವಸ್ಥ,ಹೃದಯಾಘಾತದಿಂದ ಮೃತ್ಯು

ಮಗುವನ್ನು ಏಸುವಿನ ಶಿಲುಬೆ ಬಳಿ ಮಲಗಿಸಿದ ಹೆತ್ತವರು..!