ಕರಾವಳಿಕೊಡಗುಸುಳ್ಯ

ಗೋಳಿತ್ತೊಟ್ಟು:ಬೈಕ್-ಕಾರು ಡಿಕ್ಕಿ, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ (ಕೆಎಸ್ಆರ್‌ಟಿಸಿ ಚಾಲಕ) ಮೃತ್ಯು

133

ನ್ಯೂಸ್ ನಾಟೌಟ್: ಕಳೆದ ಒಂದು ವಾರದ ಹಿಂದೆ (ಮೇ.18ರಂದು)ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಸೇತುವೆ ಸಮೀಪ ಕುಡಾಲ ಎಂಬಲ್ಲಿಯ ರಸ್ತೆ ಬಳಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಶೋಕ್ ಎಂಬುವವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಗೋಳಿತೊಟ್ಟು ಪೆರಣ ನಿವಾಸಿಯಾಗಿರುವ ಅಶೋಕ್ ಅವರು ಕೆ ಎಸ್ ಆರ್ ಟಿ ಸಿ ಬಸ್ ಚಾಲಕರಾಗಿದ್ದರು.ಅವರು ಕರ್ತವ್ಯ ಮುಗಿಸಿ ಧರ್ಮಸ್ಥಳದಿಂದ ಉಪ್ಪಾರಪಳಿಕೆ ಮಾರ್ಗವಾಗಿ ಪೆರಣದ ಮನೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿತ್ತು. ಉಪ್ಪಿನಂಗಡಿಯಿಂದ ಉಪ್ಪಾರಪಳಿಕೆಯ ಕಡೆಗೆ ಬರುತ್ತಿದ್ದ ಉಪ್ಪಿನಂಗಡಿ ಮೂಲದ ಉದ್ಯಮಿಯೊಬ್ಬರ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಹಾಗೂ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿತ್ತು.

See also  ರಾಜ್ಯ ಪೊಲೀಸ್ ಇಲಾಖೆ ಸಂಘ ಪರಿವಾರದ ಕೈಗೊಂಬೆ: ಸಿದ್ದು ಕಿಡಿ
  Ad Widget   Ad Widget   Ad Widget   Ad Widget   Ad Widget   Ad Widget