ಕರಾವಳಿಕೊಡಗುಕ್ರೈಂಪುತ್ತೂರು

ಚಿನ್ನದಂಗಡಿ ಶುಭಾರಂಭ ದಿನವೇ ಮಾಲೀಕ ಸಾವು ಪ್ರಕರಣ: ಕೊನೆಗೂ ಪೋಸ್ಟ್ ಮಾರ್ಟಮ್ ವರದಿಯಿಂದ ಹೊರಬಿತ್ತು ಸತ್ಯ ಸಂಗತಿ!

ನ್ಯೂಸ್ ನಾಟೌಟ್ : ಚಿನ್ನದ ಅಂಗಡಿಯ ಉದ್ಘಾಟನೆಯ ದಿನದಂದೇ ಮಾಲೀಕ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿತ್ತು.ಬೆಳ್ತಂಗಡಿಗೆಂದು ಹೋದವರು ಗುಂಡ್ಯ ಸಮೀಪಿಸುತ್ತಿದ್ದಂತೆ ಕೆಂಪು ಹೊಳೆಯಲ್ಲಿ ಬೈಕ್ ಅಪಘಾತಕ್ಕೀಡಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಇದು ಸಾವು ಹಲವು ಅನುಮಾನಗಳಿಗೂ ಎಡೆ ಮಾಡಿ ಕೊಟ್ಟಿತ್ತು. ಇದೀಗ ಮೃತಪಟ್ಟ ನಾಗಪ್ರಸಾದ್ ರವರ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ಸಹಜ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ.ಕಡಬ ತಾಲೂಕಿನ ಮರ್ದಾಳದ ಮಸೀದಿ ಬಿಲ್ಡಿಂಗ್ ನಲ್ಲಿ ಕಡಬ ನಿವಾಸಿಯಾಗಿರುವ ದಯಾನಂದ ಆಚಾರ್ಯ ಪುತ್ರ ನಾಗಪ್ರಸಾದ್ ಮಾಲೀಕತ್ವದ ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದ ಅಂಗಡಿ ಜೂ.22 ರಂದು ಉದ್ಘಾಟನೆಯಾಗಬೇಕಿತ್ತು.

ಮುಂಜಾನೆ ನಾಗಪ್ರಸಾದ್ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಕೆಂಪುಹೊಳೆ ಸಮೀಪ ಶವವಾಗಿ ಪತ್ತೆಯಾಗಿದ್ದರು. ಘಟನೆ ಬಗ್ಗೆ ಸಾರ್ವಜನಿಕವಾಗಿ ಹಲವು ಅನುಮಾನಗಳಿದ್ದ ಕಾರಣ ಪೊಲೀಸರು ಪೋಸ್ಟ್ ಮಾರ್ಟಮ್ ವರದಿಗಾಗಿ ಕಾಯುತ್ತಿದ್ದರು. ಇದೀಗ ಪೋಸ್ಟ್ ಮಾರ್ಟಮ್ ವರದಿ ಬಂದಿದ್ದು, ನಾಗಪ್ರಸಾದ್ ಅಪಘಾತದಿಂದಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ.

https://www.youtube.com/watch?v=hnkiiNe0x6M

Related posts

ಸುಳ್ಯ: ಆನೆಗುಂಡಿ ಚೆಡಾವಿನಲ್ಲಿ ಕಾರಿಗೆ ಲಾರಿ ಡಿಕ್ಕಿ, ಈಶ್ವರಮಂಗಲದ ಕುಟುಂಬ ಪಾರು

ಕೊಡಗಿನಲ್ಲಿ ಮತ್ತೆ ಹುಲಿರಾಯನ ಅಟ್ಟಹಾಸ, ಎರಡು ಹಸು ಬಲಿ

ಪುತ್ತೂರು: ಹಿಂದೂ ಯುವಕನ ಅಡ್ಡಗಟ್ಟಿ ನಾಲ್ವರಿಂದ ಹಲ್ಲೆ, ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ನಡೆದಿದ್ದೇನು..?