ವಿಡಿಯೋವೈರಲ್ ನ್ಯೂಸ್ಸಿನಿಮಾ

ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್..! ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ..!

152

ನ್ಯೂಸ್ ನಾಟೌಟ್: ನಟ ಗಣೇಶ್ ಅವರು ರೊಮ್ಯಾಂಟಿಕ್ ಚಿತ್ರಗಳ ಮೂಲಕ ಹೆಚ್ಚು ಗಮನ ಸೆಳೆದವರು. ಅವರು ಸಿನಿಮಾಗಳ ಮೂಲಕ ನಗಿಸಿದ್ದಾರೆ, ಅಳಿಸಿದ್ದಾರೆ, ಭಾವನಾತ್ಮಕವಾಗಿ ಸೆಳೆದುಕೊಂಡಿದ್ದಾರೆ. ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ಈಗ ಅವರ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಪಿನಾಕ’ ಎಂಬ ಶೀರ್ಷಿಕೆ ಇಡಲಾಗಿದೆ.

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ‌ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಇತ್ತೀಚೆಗೆ ಗಣೇಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಈಗ ಈ ಚಿತ್ರದ ಟೈಟಲ್ ಹಾಗೂ ಟೀಸರ್ ರಿಲೀಸ್ ಆಗಿದೆ. ಈ ಸಂಸ್ಥೆ ನಿರ್ಮಿಸುತ್ತಿರುವ 49ನೇ ಸಿನಿಮಾ ಇದಾಗಿದ್ದು, ಕನ್ನಡದಲ್ಲಿ ಇದು ಸಂಸ್ಥೆಯ ಎರಡನೇ ಪ್ರಯತ್ನ. ಈ ಚಿತ್ರಕ್ಕೆ ಧನಂಜಯ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೀಸರ್ ನೋಡಿದ ಕೆಲವರಿಗೆ ಗಣೇಶ್ ಮಾಟಗಾರನಂತೆಯೂ ಇನ್ನೂ ಕೆಲವರಿಗೆ ಅಘೋರಿಯಂತೆಯೂ ಕಾಣಿಸುತ್ತಾರೆ.

ಆದರೆ, ಸಿನಿಮಾದಲ್ಲಿ ಇರೋದೇ ಬೇರೆ ಅನ್ನೋದು ಗಣೇಶ್ ಅಭಿಪ್ರಾಯ. ಸದ್ಯ ಸಿನಿಮಾಗೆ ಕಥೆ-ಚಿತ್ರಕಥೆ ಪೂರ್ಣಗೊಂಡಿದ್ದು, ಫೆಬ್ರವರಿಯಲ್ಲಿ ಶೂಟಿಂಗ್ ಆರಂಭ ಆಗಲಿದೆ. ‘ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ’ ಎಂಬ ಸಾಲು ಟೀಸರ್​ನಲ್ಲಿ ಬರುತ್ತದೆ. ಸಿನಿಮಾದಲ್ಲಿಯೂ ರುದ್ರ ಮತ್ತು ಕ್ಷುದ್ರದ ನಡುವಿನ ಸಂಘರ್ಷವಿದೆ ಎನ್ನುತ್ತಾರೆ ಗಣೇಶ್.
‘ಪಿನಾಕ’ ಪುರಾಣ ಮತ್ತು ಇತಿಹಾಸದ ಮಿಶ್ರಣದ ಕಥೆ ಹೊಂದಿದೆ.

Click

https://newsnotout.com/2025/01/american-retaired-army-man-become-harm-to-society-s/
https://newsnotout.com/2025/01/police-control-room-kannada-news-student-issue-viral-news/
https://newsnotout.com/2025/01/kannada-news-ksrtc-bus-issue-break-fail-s-matter-d/
https://newsnotout.com/2025/01/yamaha-bike-showroom-kannada-news-more-than-50-bikes-hd/
https://newsnotout.com/2025/01/metro-case-video-issue-man-arrested-kannada-news-d/
See also  Yoga Day 2023: ಸೀರೆಯುಟ್ಟು ಯೋಗ ಮಾಡಿದ ಮಹಿಳೆಯರು..! ಹೇಗಿತ್ತು ಗೊತ್ತಾ ಚೆಂದುಳ್ಳಿ ನಾರಿಯರ ಯೋಗ? ಇಲ್ಲಿದೆ ನೋಡಿ ಕಲರ್‌ಫುಲ್ ವೈರಲ್ ವಿಡಿಯೋ..
  Ad Widget   Ad Widget   Ad Widget   Ad Widget   Ad Widget   Ad Widget   Ad Widget