ಕ್ರೈಂಬೆಂಗಳೂರುವೈರಲ್ ನ್ಯೂಸ್

ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ..! ತನ್ನದೇ ಸಹಚರನಿಗೂ ಗುಂಡು ಹಾರಿಸಿದ ಕಳ್ಳ..!

35
Spread the love

ನ್ಯೂಸ್ ನಾಟೌಟ್: ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಹಾಗೂ ಸೂರಜ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಖದೀಮರು ಸಣ್ಣ ಸಣ್ಣ ಆಭರಣದ ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸಾಕಷ್ಟು ಜನರು ಕೆಲಸ ನಿರ್ವಹಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಲ್ಲಿ ಒಬ್ಬರು, ಇಬ್ಬರು ಮಾತ್ರ ಕೆಲಸ ಮಾಡುವುದರಿಂದ ಅಂತಹ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇನ್ನು ಘಟನೆ ಸಂಬಂಧ ಆರೋಪಿಗಳು ಯಡವಟ್ಟು ಮಾಡಿದ್ದು, ಶೂಟೌಟ್ ವೇಳೆ ತಮ್ಮದೇ ಗ್ಯಾಂಗ್‌ನ ಸದಸ್ಯ ಸೂರಜ್ ಎಂಬಾತನಿಗೆ ಗುಂಡು ಹಾರಿಸಿದ್ದಾರೆ. ಆಶು ಪಂಡಿತ್ ಮಾಡಿದ ಯಡವಟ್ಟಿಗೆ ಸೂರಜ್ ಗಂಟಲಿಗೆ ಗುಂಡೇಟು ಬಿದ್ದಿದೆ. ಸದ್ಯ ಸೂರಜ್ ಗ್ವಾಲಿಯರ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಶು ಪಂಡಿತ್ ಹಾಗೂ ಖಾನಾ ಪಂಡಿತ್ ಮೇಲೆ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಕಳೆದ ವಾರವಷ್ಟೇ ಇದೇ ರೀತಿಯಾಗಿ ಮುಂಬೈನಲ್ಲಿ ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದೀಗ ನಾಲ್ವರ ಪೈಕಿ ಮೂವರನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಕೊಡಗು: ನಾಳೆ (ಸೆ.17) ಕಾವೇರಿ ತೀರ್ಥೋದ್ಭವ, ಎಷ್ಟು ಹೊತ್ತಿಗೆ ಮುಹೂರ್ತ..? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget