ಕರಾವಳಿ

ಮಹಿಳೆಯರ ಸರ ಕದ್ದಿಯುತ್ತಿದ್ದ ಖತರ್ನಾಕ್ ಕಳ್ಳರು ಅಂದರ್‌

ನ್ಯೂಸ್ ನಾಟೌಟ್ : ಮಹಿಳೆಯ ಸರ ಕಿತ್ತು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ  ಒಟ್ಟು 90 ಗ್ರಾಂ ತೂಕದ ಮೂರು ಚಿನ್ನದ ಸರಗಳು, ಎರಡು ಸ್ಕೂಟರ್ ಮತ್ತು ಮೂರು ಮೊಬೈಲ್ ಪೋನ್‌ಗಳು ಸೇರಿದಂತೆ ₹ 5 ಲಕ್ಷ ಮೌಲ್ಯ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. 

‘ಕುಲಶೇಖರ ಕಲ್ಪಣೆಯಲ್ಲಿ ವಾಸವಿರುವ ಪಿಲಿಕುಳದ ಜಗದೀಶ್ ಶೆಟ್ಟಿ (39), ಉರ್ವಸ್ಟೋರ್‌ನ ಸುಜಿತ್ ಶೆಟ್ಟಿ (40), ಪದವಿನಂಗಡಿ, ಕೊಂಚಾಡಿಯಲ್ಲಿ ವಾಸವಿರುವ ಪುತ್ತೂರು ತಾಲ್ಲೂಕು ಪಾಲ್ತಾಡಿಯ ಸುರೇಶ್ ರೈ (39) ಬಂಧಿತರು. ಆರೋಪಿಗಳಲ್ಲಿ ಸುಜಿತ್ ಶೆಟ್ಟಿಯು ಮಂಗಳೂರಿನಲ್ಲಿ 2002ರಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಆರೋಪಿ. ಆತ ಸುಜಿತ್ ಶೆಟ್ಟಿ ಹಣಕಾಸು ಸಾಲ ನೀಡುವ ವ್ಯವಹಾರಗಳಲ್ಲಿ ತೊಡಗಿದ್ದ. ಇನ್ನೊಬ್ಬ ಆರೋಪಿ ಜಗದೀಶ್ ರಿಕ್ಷಾ ಚಾಲಕ. ಸುರೇಶ್ ರೈ ಟೆಂಪೋ ಚಾಲಕ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಗರದ  ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ ಆ. 14ರಂದು ನಡೆಸಿದ್ದ ಪುಣೆಯ ಮಹಿಳೆಯ ಸರ ಕಳ್ಳತನ ಪ್ರಕರಣ ಹಾಗೂ ಕದ್ರಿ ಠಾಣೆ ವ್ಯಾಪ್ತಿಯ ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಪ್ಯಾಕ್ಟರಿಯ ರಸ್ತೆಯಲ್ಲಿ ಆ 24ರಂದು ನಡೆದಿದ್ದ ಮಹಿಳೆಯ ಸರ ಕಿತ್ತೊಯ್ದ ಎರಡು ಪ್ರಕರಣಗಳ ತನಿಖೆಯನ್ನು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್‌ ಮಹೇಶ್ ಪ್ರಸಾದ್ ನೇತೃತ್ವದ ತಂಡಕ್ಕೆ ವಹಿಸಲಾಗಿತ್ತು. ಈ ತಂಡವು ಆರೋಪಿಗಳ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

Related posts

ಸುಳ್ಯ: ವಾಹನಗಳಿಗೆ ಅಡ್ಡ ಬರುತ್ತಿದ್ದ ಆಡುಗಳನ್ನು ಪಂಚಾಯತ್ ಆವರಣದಲ್ಲಿ ಕಟ್ಟಿಹಾಕಿದ ಸಿಬ್ಬಂದಿ..! ವಾರಿಸುದಾರರು ದಂಡ ಕಟ್ಟಿ ಬಿಡಿಸಿಕೊಳ್ಳುವಂತೆ ಪ್ರಕಟಣೆ

ರಾತ್ರಿ ಕರಾವಳಿಗೆ ಅಪ್ಪಳಿಸಿದ ‘ರೆಮಲ್’ ಚಂಡಮಾರುತ..! 1 ಲಕ್ಷ ಮಂದಿಯ ಸ್ಥಳಾಂತರ

ಸುಳ್ಯದ ಜನರಿಗೆ ನಾಳೆ ವಿದ್ಯುತ್ ಶಾಕ್..!, ಇಡೀ ದಿನ ಕರೆಂಟ್ ಇರಲ್ಲ..!