Latestಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಚಿನ್ನ ಕಳ್ಳಸಾಗಾಟ ಮಾಡಿದ್ದ ನಟಿ ರನ್ಯಾ ರಾವ್ ​ಗೆ ಮತ್ತೊಂದು ಶಾಕ್..! ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲು ಪತಿ ಸಿದ್ಧತೆ..!

478

ನ್ಯೂಸ್‌ ನಾಟೌಟ್: ಗೋಲ್ಡ್ ಸ್ಮಗ್ಲಿಂಗ್​ ಕೇಸ್ ​ನಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ ಆದ ಟೆನ್ಷನ್ ​ನಲ್ಲಿರುವಾಗಲೇ ಮತ್ತೊಂದು ಶಾಕ್ ಎದುರಾಗಿದೆ. ರನ್ಯಾಳಿಂದ ವಿಚ್ಛೇದನ ಕೋರಿ‌ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಪತಿ ಜತಿನ್ ಹುಕ್ಕೇರಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮೂಲಕ ರನ್ಯಾ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಜತಿನ್ ಮುಂದಾಗಿದ್ದಾರೆ.

2024 ಅಕ್ಟೋಬರ್ 6 ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್ ​ನಲ್ಲಿ ರನ್ಯಾ, ಜತಿನ್​ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿದ್ದರು. 2024 ಅಕ್ಟೋಬರ್ 23ರಂದು ರನ್ಯಾ, ಜತಿನ್ ಎಂಗೇಜ್ ಮೆಂಟ್ ಆಗಿತ್ತು. 2024 ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ​ನಲ್ಲಿ ಮದುವೆ ಕೂಡ ಆಗಿತ್ತು. ಬಳಿಕ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ ಮೆಂಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಮದುವೆಯಾದ ಒಂದೇ ತಿಂಗಳಿಗೆ ರನ್ಯಾ, ಜತಿನ್ ನಡುವೆ ಮನಸ್ತಾಪ ಶುರುವಾಗಿದ್ದು, ಸಂಬಂಧದಲ್ಲಿ ಪಾರದರ್ಶಕತೆ ಇಲ್ಲ, ಮಾತುಕತೆಯೂ ಇರಲಿಲ್ಲವೆಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿಕರು ಸಂಧಾನಕ್ಕೆ ಪದೇ ಪದೇ ಯತ್ನಿಸಿದರೂ ಸಂಬಂಧ ಸರಿಹೋಗಿರಲಿಲ್ಲ.

ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ನಡೆಸಿದ್ದರು. ಪದೇ ಪದೆ ರನ್ಯಾ ದುಬೈ ಟ್ರಿಪ್‌ ಗೆ ಹೋಗುತ್ತಿದ್ದು, ಪತಿಗೆ ಅನುಮಾನ ಬಂದು ಜಗಳವಾಗಿದೆ. ಈ ಜಗಳ ಡಿವೋರ್ಸ್ ಹಂತಕ್ಕೂ ತಲುಪಿತ್ತು.

ಗಂಡನ ಜೊತೆ ಜಗಳವಾಡಿದರೂ ಕ್ಯಾರೆ ಎನ್ನದ ರನ್ಯಾ, ತನ್ನ ಫ್ರೆಂಡ್ ಆಗಿದ್ದ ತರುಣ್ ಜೊತೆ ಸೇರಿ ಚಿನ್ನಾ ಸಾಗಾಟಕ್ಕೆ ಇಳಿದಿದ್ದರು. ದುಬೈನಿಂದ ಬೆಂಗಳೂರಿಗೆ ಗೋಲ್ಡ್​ ತರಿಸುತ್ತಿದ್ದೇ ತರುಣ್ ಅನ್ನೋ ಡಿಆರ್​ಐ ತನಿಖೆಯಲ್ಲಿ ಗೊತ್ತಾಗಿತ್ತು.

ಇದನ್ನೂ ಓದಿಸಿಎಂ ಸಚಿವಾಲಯದಲ್ಲಿನ 30 ಸಿಬ್ಬಂದಿಯನ್ನು ವಜಾ ಮಾಡಿದ ಸರ್ಕಾರ..! ಸಿಎಂ ಸಚಿವಾಲಯದಿಂದ ಆದೇಶ..!

ಏಪ್ರಿಲ್ 10ರ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಎರಡು ದಿನಗಳ ಬಳಿಕ ಕಂಪ್ಯೂಟರ್‌ ಗೆ ಫಲಿತಾಂಶ ದಾಖಲು ಮಾಡುವ ಪ್ರಕ್ರಿಯೆ ಆರಂಭ

 

See also  ಸುಳ್ಯ: ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ಹತ್ತಿದ ವಾಹನ, ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget