Latestದೇಶ-ವಿದೇಶವೈರಲ್ ನ್ಯೂಸ್

ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ 1959ರ ಚಿನ್ನ ಖರೀದಿಯ ಬಿಲ್ ವೈರಲ್..!10 ಗ್ರಾಂ ಚಿನ್ನದ ಬೆಲೆ ಕೇವಲ 113 ರೂ..!

3.5k

ನ್ಯೂಸ್‌ ನಾಟೌಟ್‌: ಭಾರತದಲ್ಲಿ ಇದೇ ಮೊದಲ ಬಾರಿಗೆ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 10,000 ರೂ ಗಡಿ ದಾಟಿದೆ. ಏಪ್ರಿಲ್ 1 ಕ್ಕೆ 8,510 ರೂ ಇದ್ದ ಬೆಲೆ ಏಪ್ರಿಲ್ 22 ವೇಳೆಗೆ 9,290 ಕ್ಕೆ ಹೆಚ್ಚಳ ಆಗಿದೆ. ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆಯಾಗಿದ್ದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಲೋಲಕಲ್ಲೋಲ ಆಗಿದೆ.

ಇದೀಗ, 1959ರಲ್ಲಿ ಚಿನ್ನ ಖರೀದಿಸಿದ ಹಳೆಯ ಬಿಲ್ ​​ವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 63 ವರ್ಷಗಳಷ್ಟು ಹಳೆಯದಾದ ಈ ಬಿಲ್ ಕಂಡು ಜನರಿಗೆ ಅಚ್ಚರಿಯಾಗಿದೆ.

ಈ ಬಿಲ್‍ನಲ್ಲಿ 621 ಮತ್ತು 251 ರೂ.ಗಳ ಚಿನ್ನದ ವಸ್ತುಗಳನ್ನು ಖರೀದಿಸಿರುವುದನ್ನು ಕಾಣಬಹುದು. ಇದರ ಜೊತೆಗೆ ಬೆಳ್ಳಿಯ ವಸ್ತುಗಳ ದರಗಳನ್ನು ನೀಡಲಾಗಿದೆ. ಇವುಗಳ ಒಟ್ಟು ಬಿಲ್ 909 ರೂ. ಆಗಿದೆ. ಈ ಬಿಲ್​​ ಪ್ರಕಾರ 1959ರಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ 113 ರೂಪಾಯಿ ಇತ್ತು. ಇದರ ಪ್ರಕಾರ ಒಂದು ಗ್ರಾಂ ಚಿನ್ನದ ಬೆಲೆ ಕೇವಲ 10 ರೂಪಾಯಿ. ಅಂದರೆ ಒಂದು ಕ್ಷಣ ನಂಬುವುದಕ್ಕೂ ಅಸಾಧ್ಯವಾಗುವಂತಹ ದರ ಇದಾಗಿದೆ.

@upscworldofficial ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಈ ಹಳೆಯ ಬಿಲ್ ​​ನ ಫೋಟೋ ಹಂಚಿಕೊಳ್ಳಲಾಗಿದೆ. ಇದು ಮಹಾರಾಷ್ಟ್ರದ ಜುವೆಲ್ಲರಿ ಶಾಪ್​ ಒಂದರಲ್ಲಿ ಶಿವಲಿಂಗ ಎನ್ನುವ ವ್ಯಕ್ತಿ ಖರೀದಿ ಮಾಡಿದುವುದಾಗಿ ಬಿಲ್ ​ನಿಂದ ತಿಳಿದುಬಂದಿದೆ.

ಪಹಲ್ಗಾಮ್‌ ನಲ್ಲಿ ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ ವಿಶ್ವಸಂಸ್ಥೆ, ಸಂತ್ರಸ್ತ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿದ ಗೃಹ ಸಚಿವ ಅಮಿತ್ ಶಾ

See also  ರಜನೀಕಾಂತ್​ ಮೊಮ್ಮಗನನ್ನು ಹುಡುಕಿಕೊಂಡು ಮನೆಗೆ ಬಂದದ್ದೇಕೆ ಪೊಲೀಸರು? ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದೇಕೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget