ಜೀವನಶೈಲಿದೇಶ-ಪ್ರಪಂಚ

ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ ! ಅಂತರಾಷ್ಟ್ರೀಯ ತಲ್ಲಣಗಳು ಬೆಲೆ ಏರಿಕೆಗೆ ಕಾರಣವೇ ?

ನ್ಯೂಸ್ ನಾಟೌಟ್ : ಅಂತಾರಾಷ್ಟ್ರೀಯ ಮಟ್ಟದ ತಲ್ಲಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಲವಾರು ಬಿಕ್ಕಟ್ಟುಗಳು ಎದುರಾಗಿವೆ. ಆರ್ಥಿಕ ಹಿಂಜರಿತ, ಪ್ರಾಕೃತಿಕ ವಿಕೋಪ, ಯುದ್ಧ ಸೇರಿದಂತೆ ಹಲವು ಕಾರಣಗಳಿಂದಾಗಿ ಹೂಡಿಕೆದಾರರಿಗೆ ಚಿನ್ನವೇ ಹಾಟ್‌ ಫೇವರಿಟ್‌ ಆಗಿದೆ. ಏಕೆಂದರೆ, ಚಿನ್ನದ ದರದಲ್ಲಿ ಏಕಾಏಕಿ ಕುಸಿತ ಕಾಣೋದಿಲ್ಲ. ಸದಾ ಕಾಲಕ್ಕೂ ಚಿನ್ನದ ದರ ಏರುಮುಖವಾಗಿಯೇ ಸಾಗುವ ಭರವಸೆ ಇರುವ ಕಾರಣ, ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಹೂಡಿಕೆದಾರರು ಭಾವಿಸಿದ್ದಾರೆ.

ಎಲ್ಲರೂ ಚಿನ್ನದ ಮೇಲೆ ಹೂಡಿಕೆಗೆ ಆಸಕ್ತಿ ತೊರಿದ ಕಾರಣ ಸಾಮಾನ್ಯ ಜನರು ಖರೀದಿಸುವ ಆಭರಣಗಳು ಬಲು ದುಬಾರಿಯಾಗುತ್ತಾ ಸಾಗುತ್ತಿದೆ. ಬಂಗಾರದ ಬೆಲೆ ಏರಿಕೆಯಾದರೂ ಕೂಡಾ ಆಭರಣ ಖರೀದಿಸಲು ಮಾತ್ರ ಹಲವರು ಹಿಂದೇಟು ಹಾಕುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಿದ್ದು ಗ್ರಾಹಕರಿಗೆ ಶಾಕ್ ನೀಡಿದೆ.

ವರ್ಷಾನುಗಟ್ಟಲೆ ದುಡಿದು ಹಣವನ್ನು ಕೂಡಿ ಮದುವೆ ಮತ್ತು ಇತರ ಕಾರ್ಯಕ್ರಮಗಳ ಸಲುವಾಗಿ ತಮಗಿಷ್ಟದ ಆಭರಣವನ್ನು ಖರೀದಿಸಲು ಮುಂದಾಗುತ್ತಾರೆ. ಈ ವೇಳೆ ಒಮ್ಮಿಂದೊಮ್ಮೆಲೇ ಬುಧವಾರ ಫೆ.೮ರಂದು ಚಿನ್ನದ ಬೆಲೆ ರಾಜ್ಯ- ದೇಶದಲ್ಲಿ ಏಕಕಾಲಕ್ಕೆ ಹೆಚ್ಚಳವಾಗಿದೆ. ದೇಶದಲ್ಲಿ ೧ ಗ್ರಾಂ (೨೨ ಕ್ಯಾರಟ್ ) ೫,೨೭೫ ರೂ ನಿಗದಿಯಾಗಿದೆ. ರಾಜ್ಯದಲ್ಲಿ ೧೦ ಗ್ರಾಂ (೨೨ ಕ್ಯಾರಟ್ ) ಚಿನ್ನದ ಬೆಲೆ ರೂ, ೫೨,೮೦೦ ಹಾಗೂ ಅಪರಂಜಿ ಚಿನ್ನ (೨೪ ಕ್ಯಾರಟ್ ) ಬೆಲೆ ೫೭,೬೦೦ ರೂ ಇರುವುದಾಗಿ ವರದಿ ತಿಳಿಸಿದೆ.

Related posts

Schizophrenia: ಇಂದು ʼವಿಶ್ವ ಸ್ಕಿಜೋಫ್ರೇನಿಯಾʼ ದಿನ, ಈ ಮನಸ್ಸಿನ ಕಾಯಿಲೆ ʼಸ್ಕಿಜೋಫ್ರೇನಿಯಾʼ ಬಲು ಡೇಂಜರ್..! ಏನಿದರ ಲಕ್ಷಣ..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

28ನೇ ವರ್ಷಕ್ಕೆ 9 ಮಕ್ಕಳನ್ನು ಹೆತ್ತ ಮಹಾತಾಯಿ!

ಅಶ್ಲೀಲ ವಿಡಿಯೋ ವೈರಲ್ ಮಾಡಿದವರಿಗೆ ಸವಾಲೆಸೆದ ನಟಿ ಜ್ಯೋತಿ ರೈ, ಈ ವಿಡಿಯೋ ಕೂಡ ವೈರಲ್ ಮಾಡಿ ಎಂದು ಹೇಳಿದ್ಯಾಕೆ..?