ನ್ಯೂಸ್ ನಾಟೌಟ್: ಮಹಿಳೆಯೊಬ್ಬರು ಪತಿ, ಮಗುವಿನ ಜೊತೆ ಬಸ್ ಸ್ಟ್ಯಾಂಡ್ ನಲ್ಲಿದ್ದಾಗಲೇ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಮಹಿಳೆಯ 45 ಗ್ರಾಂ ಚಿನ್ನ ಕಾಣೆಯಾಗಿದೆ. ಈ ಘಟನೆ ಮೇ23ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್ ನಲ್ಲಿ ನಡೆದಿದೆ. ಕಲ್ಮಂಜ ಗ್ರಾಮದ ನಿಡಿಗಲ್ ಆದರ್ಶ ನಗರದ ಮಹಿಳೆ ಶಶಿಕಲಾ ಅನ್ನುವವರು ತಮ್ಮ ಪತಿ, ಮಗುವಿನೊಂದಿಗೆ ಕಲ್ಲಡ್ಕದಿಂದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬಿ.ಸಿ ರೋಡ್ ಗೆ ಬಂದು ಇಳಿದಿದ್ದಾರೆ. ಬಳಿಕ ರಸ್ತೆ ದಾಟಿ ಬೇಕರಿಯೊಂದರಿಂದ ತಿಂಡಿ ಖರೀದಿಸಿದ್ದಾರೆ. ಈ ವೇಳೆ ಬ್ಯಾಗ್ ನಲ್ಲಿದ್ದ ಚಿನ್ನ ಎಲ್ಲೋ ಒಂದು ಕಡೆ ಕಳವಾಗಿದೆ. ಇವರು ಅಂಗಡಿಯಿಂದ ಬಸ್ ಸ್ಟ್ಯಾಂಡ್ ಗೆ ಬಂದು ಅಲ್ಲಿ ಪರಿಶೀಲನೆ ನಡೆಸಿದಾಗ ಸುಮಾರು 2 ಲಕ್ಷ ರೂ. ಚಿನ್ನಾಭರಣ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ತಕ್ಷಣ ಸುತ್ತಮುತ್ತ ಹುಡುಕಿದರೂ ಚಿನ್ನಾಭರಣ ಸಿಗುವುದಿಲ್ಲ. ಬಳಿಕ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 91/2024 ಕಲಂ: 379 ಐಪಿಸಿ ರಂತೆ ಕೇಸ್ ದಾಖಲಿಸಲಾಗುತ್ತದೆ.