ಕರಾವಳಿಪುತ್ತೂರುಸುಳ್ಯ

ಮನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

383

ನ್ಯೂಸ್‌ನಾಟೌಟ್‌: ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಂತಡ್ಕದಲ್ಲಿ ರಹೀಂ ಶಾನ್‌ ಎಂಬವರ ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಕುಟುಂಬದ ಸದಸ್ಯರು ಭಾನುವಾರ ಸಾಯಂಕಾಲ ಮದುವೆ ಕಾರ್ಯಕ್ರಮಕ್ಕೆಂದು ತೆರಳಿದ್ದು, ರಾತ್ರಿ 8 ಗಂಟೆಯಿಂದ 11 ಗಂಟೆಯೊಳಗೆ ಮನೆಗೆ ನುಗ್ಗಿ ಸುಮಾರು ಹದಿನೈದು ಪವನ್ ಚಿನ್ನ ಹಾಗೂ ಒಂದು ಲಕ್ಷ ನಗದನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ. ಮನೆಮಂದಿ ರಾತ್ರಿ 12 ಗಂಟೆಗೆ ಬಂದಾಗ ಹಿಂಬದಿಯ ಬಾಗಿಲು ಮುರಿದಿದ್ದು, ಕಳವು ನಡೆದ ಬಗ್ಗೆ ಬೆಳಕಿಗೆ ಬಂದಿದೆ. ವಿಟ್ಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಪುತ್ತೂರು:ನಾಮಪತ್ರ ಸಲ್ಲಿಸಲಿರುವ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ,ಖ್ಯಾತ ನಟಿ ಶೃತಿ ಪುತ್ತೂರಿಗೆ ಆಗಮನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget