ನ್ಯೂಸ್ ನಾಟೌಟ್: ತಮಿಳುನಾಡಿನ ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿನಿಯರು ಗೋಕರ್ಣದ ಜಟಾಯುತೀರ್ಥ ಗುಡ್ಡದ ಬಳಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ(ಎ.24) ನಡೆದಿದೆ.
ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್(23) ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿಯರು ಎಂದು ಗುರುತಿಸಲಾಗಿದೆ.
ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿನಿಯರು ಚೆನ್ನೈನ ವೆಟ್ರಿ ಟೂರ್ಸ್ & ಟ್ರಾವೆಲ್ಸ್ ಮೂಲಕ ದಾಂಡೇಲಿ, ಗೋಕರ್ಣ ಮತ್ತು ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಗುರುವಾರ ದಾಂಡೇಲಿಯಿಂದ ತೆರಳಿ ಅಂಕೋಲಾದ ವಿಭೂತಿ ಫಾಲ್ಸ್ ನೋಡಿದ್ದರು. ನಂತರ ಸಂಜೆ ಗೋಕರ್ಣ ತಲುಪಿದ್ದರು. ಅಲ್ಲಿನ ಟೂರ್ ಗೈಡ್ ಗಾಂಧಿ ಸಿವಕುಮಾರ್ ಸೂರ್ಯಾಸ್ತ ನೋಡಲು ಕುಡ್ಲೆ ಬೀಚ್ ಬಳಿಯ ಜಟಾಯುತೀರ್ಥ ಸಮುದ್ರ ತೀರಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ದಿದ್ದರು. ಸಂಜೆ 6:20ರ ಸುಮಾರಿಗೆ ಇಬ್ಬರು ವಿದ್ಯಾರ್ಥಿನಿಯರು ಭಾರಿ ಅಲೆಗಳಿಗೆ ಸಿಕ್ಕಿ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸ್ಥಳೀಯರಾದ ಮಣಿರಾಜು ರಕ್ಷಣೆಗೆ ಧಾವಿಸಿದರೂ, ರಕ್ಷಿಸಲು ಸಾಧ್ಯವಾಗಿಲ್ಲ. ನಂತರ ಅಡ್ವೆಂಚರ್ ಬೋಟ್ ಮೂಲಕ ಇಬ್ಬರು ವಿದ್ಯಾರ್ಥಿನಿಯರನ್ನು ಮತ್ತು ಮಣಿರಾಜು ಅವರನ್ನು ದಡಕ್ಕೆ ತರಲಾಯಿತು. ಆದರೂ, ವಿದ್ಯಾರ್ಥಿನಿಯರಾದ ಕನ್ನಿಮೋಳಿ ಮತ್ತು ಹಿಂದುಜಾ ಪ್ರಾಣ ಕಳೆದುಕೊಂಡಿದ್ದಾರೆ. ಮಣಿರಾಜು ಆಪಾಯದಿಂದ ಪಾರಾಗಿದ್ದಾರೆ.
ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ಎಂದ ಗೃಹ ಸಚಿವ..! ಮುಖ್ಯಮಂತ್ರಿಗಳಿಗೆ ಅಮಿತ್ ಶಾ ಸೂಚನೆ