ಕ್ರೈಂರಾಜಕೀಯವೈರಲ್ ನ್ಯೂಸ್

ಗೋದಾಮಿನಲ್ಲಿ 10,000ಕ್ಕೂ ಹೆಚ್ಚು ಸೀರೆ ಪತ್ತೆ..! ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮತ್ತೇನೇನು ಸಿಕ್ಕಿದೆ ಗೊತ್ತಾ..?

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆ ಚುನಾವಣೆ ಘೋಷಣೆ ಆದ ಬಳಿಕ ರಾಜ್ಯದಲ್ಲಿ ಅಕ್ರಮ ಹಣ ಸಾಗಾಟ ಹೆಚ್ಚಾಗಿದೆ. ಅಕ್ರಮ ಹಣ ಸಾಗಾಟ ಪತ್ತೆಗೆ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನೂ ನಡೆಸುತ್ತಿದ್ದಾರೆ. ಅದರಲ್ಲೂ ಮಂಗಳವಾರ(ಮಾ.19) ಒಂದೇ ದಿನ ಬರೋಬ್ಬರಿ 3 ಕೋಟಿ ರೂ. ಹಣ ಸೀಜ್‌ ಮಾಡಿದ್ದಾರೆ.

ಹಲವೆಡೆ, ಕಂತೆ ಕಂತೆ ನಗದು ಪತ್ತೆಯಾಗಿದ್ದರೆ, ರಾಮನಗರದಲ್ಲಿ ಗರಿ ಗರಿ ನೋಟಿನ ಜೊತೆ ರಾಶಿರಾಶಿ ಸೀರೆಗಳು ಸಿಕ್ಕಿವೆ. ಲೋಕಸಭೆ ಚುನಾವಣೆಯ ಹೊತ್ತಲ್ಲೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ರಾಶಿರಾಶಿ ಸೀರೆಗಳು ಪತ್ತೆಯಾಗಿವೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿವೆ.

ಜೆಡಿಎಸ್​ ಕಾರ್ಯಕರ್ಯರು ದಾಳಿ ಮಾಡಿದ್ದು, ಕಾಂಗ್ರೆಸ್​ನವರು ಸೀರೆಗಳನ್ನು ತರಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್​ಪಿ ದಿನಕರ್ ಶೆಟ್ಟಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿ ಸೀರೆಗಳು ಪತ್ತೆಯಾಗಿರುವ ಬಗ್ಗೆ ರಾಮನಗರ ಜಿಲ್ಲಾಧಿಕಾರಿ‌ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿಕೆ ನೀಡಿದ್ದು, ಚುನಾವಣೆಗಾಗಿ ಸಂಗ್ರಹಿಸಿಟ್ಟಿದ್ದರಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. VRL ಗೋದಾಮಿನಲ್ಲಿ ಪತ್ತೆಯಾದ ಸೀರೆಗಳು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ. ಸೀರೆಗಳ ಬಿಲ್ ಹಾಗೂ ಸೀರೆಗಳ ಪ್ರಮಾಣಕ್ಕೆ ಅದು ಹೊಂದಾಣಿಕೆ ಆಗುತ್ತಿಲ್ಲ.

ಸೀರೆಗಳ ಬಗ್ಗೆ ಲೆಕ್ಕ ಮಾಡಿ ನಾವು ಕೇಸ್ ರಿಜಿಸ್ಟರ್‌ ಮಾಡುತ್ತೇವೆ ಎಂದಿದ್ದಾರೆ. ಇನ್ನೊಂದು ವಾಹನ‌ದಲ್ಲೂ ಸೀರೆ ತುಂಬಿಕೊಂಡು ಹೋದ ಆರೋಪ ಇದೆ. ವಾಹನ ಪತ್ತೆ ಹಚ್ಚಲು ಈಗಾಗಲೇ ಫ್ಲೈಯಿಂಗ್ ಸ್ಕ್ವಾಡ್ ಕಳುಹಿಸಲಾಗಿದೆ. ಎನ್​ಎಂ ಗ್ರಾನೈಟ್​ ಕಂಪನಿ ಹೆಸರಿನಲ್ಲಿ ಗುಜರಾತ್​​ನಿಂದ ಸೀರೆ ತರಿಸಲಾಗಿದೆ ಎಂದು ವರದಿ ತಿಳಿಸಿದೆ.

Related posts

ಪುತ್ತೂರು: ಊಟ ಮಾಡಿ ಮಲಗಿದ್ದ ದಂಪತಿ ತಡ ರಾತ್ರಿಯಲ್ಲಿ ನೇಣಿಗೆ ಶರಣು

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ 15 ಸಿಮ್ ಕಾರ್ಡ್ ಗಳು ಪತ್ತೆ..! ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್..! ತನಿಖೆಯಲ್ಲಿ ಮತ್ತಷ್ಟು ಕರಾಳ ಮುಖ ಬಯಲು..!

ಸುಳ್ಯ: ನಿವೃತ್ತ ಫಾರೆಸ್ಟ್ ಆಫೀಸರ್ ಪದ್ಮಯ್ಯ ಗೌಡ ನಿಧನ, ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ