ಕರಾವಳಿವೈರಲ್ ನ್ಯೂಸ್

ನೇತ್ರಾವತಿ ನದಿಯಲ್ಲಿ ಗೋಚರಿಸಿದ ಸೀತಾ ದೇವಿಯ ಪಾದ..!

355

ನ್ಯೂಸ್‌ ನಾಟೌಟ್‌: ನೇತ್ರಾವತಿ ನದಿಯಲ್ಲಿ ಈ ಬಾರಿ ನೀರಿನ ಮಟ್ಟ ಗಣನೀಯ ಇಳಿದಿರುವ ಪರಿಣಾಮ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನದಿಯ ಮಧ್ಯೆ ಕಲ್ಲುಗಳ ಮೇಲೆ ಇರುವ ಸೀತಾದೇವಿಯ ಪಾದ ಎಂದು ಧಾರ್ಮಿಕ ನಂಬಿಕೆಯುಳ್ಳ ರಚನೆಗಳು ಗೋಚರಿಸಿವೆ.

ನದಿಯಲ್ಲಿ ಇಂತಹ ಅನೇಕ ಕೌತುಕಗಳಿವೆಯಾದರೂ ಇತ್ತೀಚಿನ ವರ್ಷಗಳಲ್ಲಿ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಅವುಗಳು ನೀರಿನೊಳಗಿರುತ್ತಿದ್ದವು. ಈ ಬಾರಿ ನದಿ ನೀರು ಸಂಪೂರ್ಣ ಬತ್ತಿರುವ ಕಾರಣ ನದಿಯಲ್ಲಿರುವ ವಿಶೇಷಗಳು ಕಾಣಿಸಲಾರಂಭಿಸಿವೆ. ಶಿವಲಿಂಗ, ಹೂವು, ಜಡೆ, ಬಟ್ಟಲು, ನಂದಿ, ಪಾದಗಳು ಹೀಗೆ ಹತ್ತಾರು ರಚನೆಗಳು ಇಲ್ಲಿನ ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ.

ಸ್ಥಳೀಯರು ಇದು ಸೀತಾ ದೇವಿಯದ್ದೇ ಪಾದ ಎಂದೇ ಪೂಜನೀಯ ಭಾವ ಹೊಂದಿದ್ದಾರೆ. ಕೆಲವೊಂದು ಧಾರ್ಮಿಕ ನಂಬಿಕೆಯ ಗುಂಡಿಗಳು, ಕಯಗಳು ಕೂಡ ಈ ಬಾರಿ ಕಾಣಸಿಕ್ಕಿವೆ. ಕಲ್ಲುಬಂಡೆ ವಿವಿಧ ವಿನ್ಯಾಸಗಳು ಕೂಡ ಆಕರ್ಷಣೀಯವಾಗಿ ಕಂಡುಬರುತ್ತಿವೆ

See also  ಬೆಳ್ಳಾರೆ: ತಡರಾತ್ರಿ ಪತಿ-ಪತ್ನಿ ನಿದ್ರೆಯಲ್ಲಿದ್ದಾಗ ಮಂಕಿ ಕ್ಯಾಪ್ ಹಾಕ್ಕೊಂಡು ಬಂದ್ರು ಅಪರಿಚಿತರು..! ಕರೆಂಟ್ ಮೈನ್ ಸ್ವಿಚ್ ಆಫ್ ಮಾಡಿ ಹೇಳಿದ್ದೇನು..? ಮಹಿಳೆ ಪೊಲೀಸರಿಗೆ ಕೊಟ್ಟ ದೂರಿನಲ್ಲೇನಿದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget