ವೈರಲ್ ನ್ಯೂಸ್

ಸ್ಕೂಟಿಯಲ್ಲಿ ತ್ರಿಬಲ್ ರೈಡಿಂಗ್ ಮಾಡೋಕೆ ಹೋಗಿ ಉರುಳಿ ಬಿದ್ದ ಯುವತಿಯರು..! ಇಲ್ಲಿದೆ ನೋಡಿ ವೈರಲ್ ವಿಡಿಯೋ..

269

ನ್ಯೂಸ್ ನಾಟೌಟ್ : ಇತ್ತೀಚೆಗೆ ಯುವಕರಂತೆ ಯುವತಿಯರು ಕೂಡ ದ್ವಿಚಕ್ರ ವಾಹನಗಳಲ್ಲಿ ಸವಾರಿ ಆರಂಭಿಸಿದ್ದಾರೆ. ನಾವು ಯಾರಿಗೂ ಏನೂ ಕಮ್ಮಿ ಇಲ್ಲ ಅನ್ನುವಂತೆ ತ್ರಿಬಲ್ ರೈಡ್ ಕೂಡ ಮಾಡ್ತಿದ್ದಾರೆ. ಹೀಗೆ ಸ್ಕೂಟಿ ರೈಡ್ ಮಾಡೋಕೆ ಹೋಗಿ ಯುವತಿಯರು ಬ್ಯಾಲೆನ್ಸ್ ತಪ್ಪಿ ರಸ್ತೆ ಬದಿಯಲ್ಲಿ ಉರುಳಿ ಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಅಪ್​ ರೋಡ್​ನಲ್ಲಿ ಓರ್ವ ಸವಾರ ಹೋಗುವುದಕ್ಕೆ ಹರಸಾಹಸ ಪಡುತ್ತಾರೆ. ಆದರೆ ಈ ವಿಡಿಯೋದಲ್ಲಿ ಮೂವರು ಯುವತಿಯರು ತ್ರಿಬಲ್​​ ರೈಡಿಂಗ್​ ಹೋಗಿದ್ದಾರೆ. ಆಮೇಲೆ ಆಗಿರೋದೇ ಬೇರೆ ಅನ್ನೋದು ವಿಶೇಷವಾಗಿದೆ.

ರೋಡ್​ ಅಪ್​ ಇತ್ತು. ಇದರಿಂದಾಗಿ ಗಾಡಿ ಹಿಂದಕ್ಕೂ ಹೋಗದೆ, ಮುಂದಕ್ಕೂ ಹೋಗದೆ ಸ್ಥಳದಲ್ಲೇ ನಿಂತುಕೊಂಡಿದೆ. ಬಹುಶಃ ತೂಕ ಜಾಸ್ತಿಯಾಗಿದ್ದರಿಂದ ಸಾಧ್ಯವಾಗಲಿಲ್ಲ ಅನಿಸುತ್ತೆ. ಗಾಡಿ ಮುಂದಕ್ಕೆ ಹೋಗುತ್ತಿಲ್ಲ ಎಂದು ಯುವತಿಯೊಬ್ಬಳು ಗಾಡಿಯಿಂದ ಕೆಳಕ್ಕೆ ಇಳಿದಿದ್ದಾಳೆ. ಇದೇ ವೇಳೆ ಏಕಾಏಕಿ ಬ್ಯಾಲೆನ್ಸ್​ ಕೈಕೊಟ್ಟು ಸ್ಕೂಟಿಯಲ್ಲಿದ್ದ ಮೂವರು ಯುವತಿಯರು ರಸ್ತೆ ಪಕ್ಕವಿದ್ದ ಆಳವಾದ ಜಾಗಕ್ಕೆ ಜಾರಿ ಬಿದ್ದಿದ್ದಾರೆ. ಈ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಎಲ್ಲ ಕಡೆ ವೈರಲ್ ಆಗುತ್ತಿದೆ.

ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಜನ ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ನಿಮಗೆ ಯಾಕೆ ಈ ರೀತಿ ಶೋಕಿ, ಇದೆಲ್ಲಾ ನಿಮಗೆ ಬೇಕಿತ್ತಾ ಎಂದು ಕಾಮೆಂಟ್ ಮಾಡಿದ್ದಾರೆ.

See also  ಮಗಳ ಬಂಧನದ ಬಗ್ಗೆ ಚೈತ್ರಾ ಕುಂದಾಪುರ ತಾಯಿ ಹೇಳಿದ್ದೇನು? ಪೊಲೀಸರೇ ಫೋನ್ ಮಾಡಿಸಿ ತಾಯಿ ಬಳಿ ಮಾತನಾಡಿಸಿದರಾ?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget