ನ್ಯೂಸ್ ನಾಟೌಟ್: ಗರ್ಲ್ಸ್ ಹಾಸ್ಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಾಸ್ಟೆಲ್ ಒಳಗೆ ಸಿಲುಕಿಕೊಂಡಿದ್ದ ಇಬ್ಬರು ಹುಡುಗಿಯರ ಜೀವ ಉಳಿಸಿಕೊಳ್ಳಲು ವಿದ್ಯಾರ್ಥಿನಿಯರು ಎರಡನೇ ಮಹಡಿಯಿಂದ ಜಿಗಿದಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಿನ್ನೆ(ಮಾ.27) ಸಂಜೆ ನಡೆದಿದೆ.
ಗ್ರೇಟರ್ ನೋಯ್ಡಾದ ನಾಲೆಡ್ಜ್ ಪಾರ್ಕ್- 3 ರಲ್ಲಿರುವ ಅನ್ನಪೂರ್ಣ ಗರ್ಲ್ಸ್ ಹಾಸ್ಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಎಸಿ ಸ್ಫೋಟಗೊಂಡ ಪರಿಣಾಮ ಹಾಸ್ಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಹಾಸ್ಟೆಲ್ ನ ಎರಡನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಹುಡುಗಿಯರನ್ನು ಸ್ಥಳೀಯರು ಏಣಿಯ ಸಹಾಯದಿಂದ ರಕ್ಷಿಸಿದ್ದಾರೆ. ಆದರೆ, ಒಬ್ಬ ಹುಡುಗಿ ಏಣಿಗೆ ಕಾಲಿಡಲು ಪ್ರಯತ್ನಿಸುತ್ತಿದ್ದಾಗ ಕೆಳಕ್ಕೆ ಬಿದ್ದಳು. ಬಿದ್ದ ವಿದ್ಯಾರ್ಥಿನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
#Fire breaks out at a #girls‘ #hostel in #GreaterNoida. Students jumped to safety, but one girl slipped and injured her leg. pic.twitter.com/TKeZU50RIq
— Akashdeep Singh (@akashgill78) March 28, 2025
ಗುರುವಾರ ಸಂಜೆ 5 ಗಂಟೆ ಸುಮಾರಿಗೆ, ನಾಲೆಡ್ಜ್ ಪಾರ್ಕ್ -3 ರಲ್ಲಿರುವ ಅನ್ನಪೂರ್ಣ ಗರ್ಲ್ಸ್ ಹಾಸ್ಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಮ್ಮ ತಂಡ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಿಸಿತು ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
View this post on Instagram
ಇದನ್ನೂ ಓದಿ: ತನ್ನ ಖಾಸಗಿ ವಿಡಿಯೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿದ ನಟಿ ಶ್ರುತಿ ನಾರಾಯಣನ್..! ಆಕೆ ಬರೆದುಕೊಂಡ ಪೋಸ್ಟ್ ನಲ್ಲೇನಿದೆ..?
ಕೊಡಗಿನ ಪೊನ್ನಂಪೇಟೆಯಲ್ಲಿ ಕತ್ತಿಯಿಂದ ಕೊಚ್ಚಿ ನಾಲ್ವರ ಹತ್ಯೆ..! ಅಕ್ರಮ ಸಂಬಂಧದ ಶಂಕೆ..!