Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಲೈವ್ ನಲ್ಲಿರುವಾಗಲೇ ಯುವತಿಯನ್ನು ಗುಂಡಿಕ್ಕಿ ಹತ್ಯೆ..! ವಿಡಿಯೋ ವೈರಲ್

941

ನ್ಯೂಸ್ ನಾಟೌಟ್: ಸುಂದರವಾಗಿರುವ ಕಾರಣಕ್ಕೆ ಕೆಲವರು ಕಿರುಕುಳ ಅನುಭವಿಸಬೇಕಾದ ಪರಿಸ್ಥಿತಿ ಬಂದಿದ್ದನ್ನು ಕೇಳಿರಬಹುದು. ಮೆಕ್ಸಿಕೋದಲ್ಲಿ ಸುಂದರುವಾಗಿರುವ ಕಾರಣಕ್ಕೆ 23 ವರ್ಷದ ಸೋಶಿಯಲ್ ಮೀಡಿಯಾ ಇನ್ ​ಫ್ಲುಯೆನ್ಸರ್ ​ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಟಿಕ್ ​ಟಾಕ್ (Tik Tok) ಲೈವ್ ಸ್ಟ್ರೀಮಿಂಗ್ ಮಾಡುವಾಗಲೇ ಈ ಘಟನೆ ನಡೆದಿದೆ.

ವ್ಯಾಲೆರಿಯಾ ಮಾರ್ಕೆಜ್ ಎಂಬುವವರು ಮೃತ ಯುವತಿ ಎಂದು ಗುರುತಿಸಲಾಗಿದೆ. ಅವರು ಬ್ಯೂಟಿ ಸಲೂನ್ ಒಂದನ್ನು ನಡೆಸುತ್ತಿದ್ದರು. ಅಲ್ಲಿ ವ್ಯಾಲೆರಿಯಾ ಖುಷಿಯಿಂದ ಲೈವ್​​ಸ್ಟ್ರೀಮ್ ಮಾಡುತ್ತಿದ್ದರು. ಈ ವೇಳೆ ಸಲೂನ್ ​ಗೆ ಎಂಟ್ರಿ ಕೊಟ್ಟ ಅನಾಮಧೇಯ ವ್ಯಕ್ತಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ. ಆ ಬಳಿಕ ಸ್ಥಳಕ್ಕೆ ಪೊಲೀಸರು ಬಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.

ವ್ಯಾಲೆರಿಯಾ ಗೊಂಬೆಯನ್ನು ಇಟ್ಟುಕೊಂಡು ಆಟ ಆಡುತ್ತಿದ್ದರು. ಈ ವೇಳೆ ಅವರ ಹೊಟ್ಟೆಗೆ ಶೂಟ್ ಮಾಡಲಾಗಿದೆ. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಅವರು ಅಸುನೀಗಿದ್ದಾರೆ. ಆ ಬಳಿಕ ಯಾರೋ ಒಬ್ಬರು ಅವರ ಮೊಬೈಲ್ ತೆಗೆದುಕೊಂಡು ಲೈವ್ ​ಸ್ಟ್ರೀಮ್​ನ ನಿಲ್ಲಿಸಿದ್ದಾರೆ. ಉಡುಗೊರೆ ಕೊಡೋ ನೆಪದಲ್ಲಿ ಬಂದ ವ್ಯಕ್ತಿ ಈ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೆಕ್ಸಿಕೋದಲ್ಲಿ ಸಾಮಾಜಿಕ ಜಾಲತಾಣದ ಮಹಿಳಾ ಇನ್ ​ಫ್ಲುಯೆನ್ಸರ್ ಗಳ ಮೇಲೆ ಇಂತಹ ಹಲವು ದಾಳಿಗಳು ನಡೆದಿವೆ ಎಂದು ವರದಿ ಹೇಳಿದೆ.

ಭಾರತದೊಂದಿಗೆ ‘ಶಾಂತಿ ಮಾತುಕತೆ’ಗೆ ಸಿದ್ಧ ಎಂದ ಪಾಕ್ ಪ್ರಧಾನಿ..! ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಯ ಭೇಟಿ ವೇಳೆ ಹೇಳಿಕೆ..!
ಕೋಟದಲ್ಲಿ ಪಾಠ ಮಾಡುವುದಕ್ಕೂ ಬಂದ್ರು ನೋಡಿ ರೋಬೋ ಟೀಚರ್ಸ್..!ವಿದ್ಯಾಸಂಸ್ಥೆಯೊಂದರ ಹಳೆ ವಿದ್ಯಾರ್ಥಿಗಳಿಂದ ರಾಜ್ಯದಲ್ಲೇ ಮೊತ್ತ ಮೊದಲ ಪ್ರಯೋಗ!

See also  ದರ್ಶನ್ ಪ್ರಕರಣ: ಕೈದಿ ನಂಬರ್ 'D 6106' ಎಂದು ಹೇರ್ ಕಟಿಂಗ್‌ ಮಾಡಿಸಿಕೊಂಡ ಅಭಿಮಾನಿ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget