ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಮದುವೆಗೆ 4 ದಿನ ಇರುವಾಗ ಪೊಲೀಸರೆದುರೇ ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ತಂದೆ..! ಇಲ್ಲಿದೆ ಸಿನಿಮೀಯ ಘಟನೆ..!

ನ್ಯೂಸ್ ನಾಟೌಟ್: ಜನವರಿ 18 ರಂದು ಮದುವೆ ನಡೆಯಬೇಕಿತ್ತು, ನಾಲ್ಕೇ ನಾಲ್ಕು ದಿನ ಇರುವಾಗ ತಂದೆ ಮಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗ್ವಾಲಿಯರ್ ​ನಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿಗಳ ಎದುರೇ ವ್ಯಕ್ತಿಯೊಬ್ಬ ತನ್ನ 20 ವರ್ಷದ ಮಗಳನ್ನು ಗುಂಡಿಕ್ಕಿ ಕೊಂದಿದ್ದಾನೆ. ಮಗಳು ತನು ಗುರ್ಜಾರ್ ತನ್ನ ಮನೆಯವರು ಏರ್ಪಡಿಸಿದ್ದ ಮದುವೆಯನ್ನು ಸಾರ್ವಜನಿಕವಾಗಿ ವಿರೋಧಿಸಿ, ತನ್ನ ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.
ಮಂಗಳವಾರ(ಜ.14) ರಾತ್ರಿ 9 ಗಂಟೆ ಸುಮಾರಿಗೆ ನಗರದ ಗೋಲಾ ಕಾ ಮಂದಿರ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ.

ತನ್ನ ಕೊಲೆಗೆ ಕೆಲವೇ ಗಂಟೆಗಳ ಮೊದಲು, ತಾನು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾಳೆ, “ನಾನು ವಿಕ್ಕಿಯನ್ನು ಮದುವೆಯಾಗಲು ಬಯಸುತ್ತೇನೆ. ನನ್ನ ಮನೆಯವರು ಆರಂಭದಲ್ಲಿ ಒಪ್ಪಿದ್ದರು ಆದರೆ ನಂತರ ನಿರಾಕರಿಸಿದರು . ಅವರು ನನ್ನನ್ನು ಪ್ರತಿದಿನ ಥಳಿಸುತ್ತಿದ್ದಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಏನಾದರೂ ಆದರೆ ಅದಕ್ಕೆ ನನ್ನ ಕುಟುಂಬದವರು ಹೊಣೆಯಾಗುತ್ತಾರೆ” ಎಂದು ವಿಡಿಯೋದಲ್ಲಿ ಹೇಳಿದ್ದಳು.
ವಿಕ್ಕಿ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, ಆರು ವರ್ಷಗಳಿಂದ ತನು ಜೊತೆ ಸಂಬಂಧ ಹೊಂದಿದ್ದರು. ವಿಡಿಯೋ ವೈರಲ್ ಆದ ನಂತರ ಪೊಲೀಸ್ ಅಧಿಕಾರಿಗಳ ತಂಡವು ಇಬ್ಬರ ನಡುವೆ ಸಂಧಾನ ಮಾಡಿಸಲು ಮನೆಗೆ ಬಂದಿತ್ತು. ಆ ಸಮಯದಲ್ಲಿ ತನು ಮನೆಯಲ್ಲಿ ಇರಲು ನಿರಾಕರಿಸಿದಳು. ಆಗ ತಂದೆ ರೂಮಿಗೆ ಕರೆದೊಯ್ದು ಖಾಸಗಿಯಾಗಿ ಮಾತನಾಡಬೇಕೆಂದರು.

ನಂತರ ನಡೆದದ್ದು ಭಯಾನಕ ಘಟನೆ. ಬಂದೂಕಿನಿಂದ ಮಗಳ ಮೇಲೆ ಗುಂಡು ಹಾರಿಸಿದ್ದರು. ಅದು ಆಕೆಯ ಕುತ್ತಿಗೆ ಮತ್ತು ಕಣ್ಣು, ಮೂಗಿನ ನಡುವಿನ ಪ್ರದೇಶಕ್ಕೆ ತಗುಲಿತ್ತು ತಕ್ಷಣವೇ ಕುಸಿದುಬಿದ್ದಳು. ತಕ್ಷಣವೇ ಪೊಲೀಸರು ಅಲ್ಲಿಗೆ ಬಂದು ನಡೆದಿರುವ ಘಟನೆ ನೋಡಿ ಬೆಚ್ಚಿಬಿದ್ದರು. ಮಹೇಶ್ ಗುರ್ಜರ್ ನನ್ನು ಬಂಧಿಸಲಾಗಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click

https://newsnotout.com/2025/01/ayyappa-swami-devotees-hit-and-run-kannada-news-8-people/
https://newsnotout.com/2025/01/lakshmi-hebbalkar-kannada-news-doctor-kannada-news-d/
https://newsnotout.com/2025/01/udupi-kannada-news-malpe-jwellery-viral-news/
https://newsnotout.com/2025/01/kumbha-mela-nagasadhu-kannada-news-3-5-crore-people/
https://newsnotout.com/2025/01/tulu-cinema-rupesh-shetty-and-bollywood-actor-tulunadu/
https://newsnotout.com/2025/01/monkey-illness-kannada-news-132-people-issue-last-year/
https://newsnotout.com/2025/01/mahakumbha-mela-steve-jobs-wife-in-kumbh-mela-kannada-news-health/
https://newsnotout.com/2025/01/mahakumbha-mela-2025-and-muslim-man-arrested-for-suspect-kannada-news/

Related posts

ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಿದ್ದಕ್ಕೆ ಪಾಕ್‌ ಪ್ರಧಾನಿ ಅಭಿನಂದನೆ!? ಏನಿದು ಟ್ವೀಟ್..?

ದೇಶದಲ್ಲಿ HMPV ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ..! ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ..!

ಹುಸಿ ಬಾಂಬ್ ಬೆದರಿಕೆಗಳಿಂದ ಒಂದು ವಿಮಾನಕ್ಕೆ ಸುಮಾರು 3ಕೋಟಿ ರೂ. ನಷ್ಟ..! ಒಂದು ವಾರದೊಳಗೆ ಸುಮಾರು 40ಕ್ಕೂ ಹೆಚ್ಚು ಹುಸಿ ಬಾಂಬ್ ಕರೆಗಳು..!