ರಾಜ್ಯ

ಗುಡಿಸಲಿನಲ್ಲಿ ಮಲಗಿದ್ದ 14 ತಿಂಗಳ ಹೆಣ್ಣು ಮಗು ಅಪಹರಣ: ದಂಪತಿ ಸ್ನಾನಕ್ಕೆಂದು ನದಿಗೆ ತೆರಳಿದ್ದಾಗ ಘಟನೆ

ನ್ಯೂಸ್‌ ನಾಟೌಟ್‌: ಗುಡಿಸಲಿನಲ್ಲಿ ಮಲಗಿದ್ದ ೧೪ ತಿಂಗಳ ಹೆಣ್ಣು ಮಗುವೊಂದನ್ನು ದುರುಳರು ಅಪಹರಿಸಿದ (Child Abduction) ಆಘಾತಕಾರಿ ಘಟನೆ ಬಗ್ಗೆ ವರದಿಯಾಗಿದೆ. ಹಾಸನ ಜಿಲ್ಲೆಯ (Hasan news) ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಳುವಾದ ಮಗು ಸಂಜು ಮತ್ತು ರೋಹಿತ್ ಎಂಬ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ. ಸಂಜು ಮತ್ತು ರೋಹಿತ್ ದಂಪತಿ ಮಧ್ಯಪ್ರದೇಶ ರಾಜ್ಯದ ಸತ್ಮ ಜಿಲ್ಲೆಯ ವೀರ್‌ಸಿಂಗ್‌ಪುರ್ ತಾಲ್ಲೂಕಿನವರು ಎಂದು ತಿಳಿದು ಬಂದಿದೆ. ಕಳೆದ ಮೂರು ತಿಂಗಳ ಹಿಂದೆ ಇಟ್ಟಿಗೆ ಕೆಲಸಕ್ಕಾಗಿ ಬಂದಿದ್ದರು.

ದಂಪತಿಗೆ 4 ವರ್ಷದ ಗಂಡು ಮಗುವೂ ಇದ್ದು, ಸಂಜೆ ಕೆಲಸ ಮುಗಿಸಿ ಬಂದು ಮನೆಯಲ್ಲಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಮಲಗಿಸಿ ದಂಪತಿ ಸ್ನಾನಕ್ಕೆ ನದಿಗೆ ತೆರಳಿದ್ದರು. ಇಪ್ಪತ್ತು ನಿಮಿಷದ ಬಳಿಕ ದಂಪತಿ ಮನೆಗೆ ವಾಪಸ್ ಆದಾಗ ಹೆಣ್ಣು ಮಗು ಮನೆಯಲ್ಲಿ ಇರಲಿಲ್ಲ. ಮಗುವನ್ನು ಅಪಹರಿಸಿದ ಆರೋಪಿಗಳು ಗಂಡು ಮಗುವನ್ನು ಹಾಗೇ ಬಿಟ್ಟು ಹೋಗಿದ್ದಾರೆ.ಮಗುವನ್ನು ಹುಡುಕಿ‌ ಕೊಡುವಂತೆ ಪೊಲೀಸ್ ಠಾಣೆಗೆ ದಂಪತಿ ದೂರು ಸಲ್ಲಿಸಿದ್ದಾರೆ. ಹೆಣ್ಣು ಮಗುವನ್ನು ಮಾತ್ರ ಅಪಹರಿಸಿರುವ ಹಿನ್ನೆಲೆಯಲ್ಲಿ ನಾನಾ ಬಗೆಯ ಶಂಕೆಗಳು ವ್ಯಕ್ತವಾಗಿವೆ. ದಂಪತಿ ಹಾಗೂ ಮಕ್ಕಳನ್ನು ಗಮನಿಸುತ್ತಿದ್ದ ವ್ಯಕ್ತಿಗಳು ಈ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

ಗಣೇಶ ಮೆರವಣಿಗೆ ವೇಳೆ ಹಿಂಸಾಚಾರ ಪ್ರಕರಣ ಸಂಬಂಧ 46 ಮಂದಿ ಬಂಧನ..! ಪ್ರಕರಣದ ಬಗ್ಗೆ ಉಡಾಫೆಯಾಗಿ ಉತ್ತರಿಸಿದ ಗೃಹ ಸಚಿವರು..!

ಸಿದ್ದರಾಮಯ್ಯ ನಮ್ಮ ಮೂಲ ಕಾಂಗ್ರೆಸಿಗರಲ್ಲ ಎಂದ ಡಿ.ಕೆ. ಸುರೇಶ್..! ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ ಎಂದ ಲೋಕಸಭಾ ಅಭ್ಯರ್ಥಿ

ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ..! ಡಾ.ಸೂರಜ್​ ರೇವಣ್ಣ ಪ್ರಕರಣ​ ಸಿಐಡಿಗೆ ವರ್ಗಾವಣೆ..! ಎಡಿಜಿಪಿ ಬರೆದ ಪತ್ರದಲ್ಲೇನಿದೆ..?