Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಥೈಲೆಂಡ್ ​ನಲ್ಲಿ ಜರ್ಮನ್​ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರು ಅರೆಸ್ಟ್..! ಪ್ರವಾಸಕ್ಕೆ ಹೋಗಿದ್ದವರಿಂದ ಕೃತ್ಯ..!

654

ನ್ಯೂಸ್‌ ನಾಟೌಟ್: ಮಹಾರಾಷ್ಟ್ರದ ಸತಾರಾದ ಇಬ್ಬರು ಯುವಕರು ವಿದೇಶಕ್ಕೆ ಹೋದಾಗ ಅಲ್ಲಿ ಅತ್ಯಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ಥೈಲೆಂಡ್ ​ನಲ್ಲಿ ಜರ್ಮನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರನ್ನು ಬಂಧಿಸಲಾಗಿದೆ.

ಈ ಇಬ್ಬರು ಪ್ರವಾಸಕ್ಕೆಂದು ಥೈಲೆಂಡ್ ​ಗೆ ಹೋಗಿದ್ದರು. ಸೂರತ್ ಥಾನಿ ಪ್ರಾಂತ್ಯದ ರಿನ್ ಬೀಚ್‌ ಗೆ ಹೋಗಿದ್ದರು. ಆಗ ಇಬ್ಬರೂ ಜರ್ಮನ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಮಾಹಿತಿ ಲಭ್ಯವಾಗಿದೆ.

ಸಂತ್ರಸ್ತೆ ಕೊಹ್ ಫಂಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಸ್ತುತ, ಅವರು ಜೈಲಿನಲ್ಲಿದ್ದಾರೆ ಮತ್ತು ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೃತ್ಯವನ್ನು ವಿಜಯ್ ದಾದಾಸಾಹೇಬ್ ಎಂಬಾತ ಒಪ್ಪಿಕೊಂಡಿದ್ದಾರೆ, ಆದರೆ ರಾಹುಲ್ ಬಾಳಾಸಾಹೇಬ್ ಅದನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ. ಮಹಿಳೆಯ ಮೇಲೆ ಅತ್ಯಾಚಾರ ಮಾಡಿಲ್ಲ ಆದರೆ ಆಕೆ ವಿರೋಧಿಸಿದರೂ ಆಕೆಯನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತುಕೊಟ್ಟಿರುವುದು ಸತ್ಯ ಎಂದಿದ್ದಾರೆ. ಈ ಅಪರಾಧಕ್ಕೆ 4-20 ವರ್ಷಗಳವರೆಗೂ ಶಿಕ್ಷೆ ವಿಧಿಸಬಹುದಾದ ಸಾಧ್ಯತೆಗಳಿವೆ. 10.33 ಲಕ್ಷದವರೆಗೂ ದಂಡ ವಿಧಿಸಬಹುದು.

ಈ ಘಟನೆ ಮಾರ್ಚ್ 14 ರಂದು ಬೆಳಗಿನ ಜಾವ 4.50 ಕ್ಕೆ ಹಾದ್ ರಿನ್ ಬೀಚ್‌ ನಲ್ಲಿ ನಡೆದಿದೆ. ಘಟನೆ ನಡೆದ ಸಮಯದಲ್ಲಿ ತಾನು ಕುಡಿದ ಮತ್ತಿನಲ್ಲಿದ್ದ ಕಾರಣ ಆರೋಪಿಯ ಗುರುತು ಖಚಿತವಿಲ್ಲ ಎಂದು ಮಹಿಳೆ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರದೇಶದ ಭದ್ರತಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇವರಿಬ್ಬರು ಪತ್ತೆಯಾಗಿದ್ದಾರೆ.

ಇದನ್ನೂ ಓದಿಅರ್ಜಿ ಆಹ್ವಾನಿಸದೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ವಿತರಣೆಗೆ ರಾಜ್ಯ ಸರ್ಕಾರ ತಯಾರಿ..! ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹೇಳಿದ್ದೇನು..?

See also  8 ವರ್ಷದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಕೃಷಿ ಹೊಂಡಕ್ಕೆ ಹಾರಿದ ತಾಯಿ..! ದೂರು ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget