ನ್ಯೂಸ್ ನಾಟೌಟ್: ಕೈತುಂಬಾ ಸಂಬಳ ಸಿಗುವ ಕೆಲಸ, ಮನೆ, ಕುಟುಂಬ ಎಲ್ಲವು ಇದ್ದವರು ಕೂಡ ಕೊನೆಗೊಂದು ದಿನ ಏನು ಇಲ್ಲದವರಂತೆ ಬದುಕಬಹುದು. ಇದಕ್ಕೆ ಉದಾಹರಣೆಯಂತೆ ಇಲ್ಲೊಬ್ಬ ವ್ಯಕ್ತಿ, ಒಂದು ಕಾಲದಲ್ಲಿ ಯಶಸ್ವಿ ವೃತ್ತಿಪರನಾಗಿದ್ದನು. ಜರ್ಮನಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕೈ ತುಂಬಾ ಸಂಬಳ ಸಿಗುವ ಉದ್ಯೋಗದಲ್ಲಿದ್ದನು. ಆದರೆ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದಾನೆ.
ಕರ್ನಾಟಕ ಪೋರ್ಟ್ ಪೋಲಿಯೊ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವ್ಯಕ್ತಿಯ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಈ ವ್ಯಕ್ತಿಯೂ, ”ನಾನು 2013ರಲ್ಲಿ ಫ್ರಾಂಕರ್ಟ್‌ನಲ್ಲಿದ್ದೆ, ನಂತರದಲ್ಲಿ ನಾನು ಬೆಂಗಳೂರಿಗೆ ಬಂದೆ. ಆ ಬಳಿಕ ನಾನು ಗ್ಲೋಬಲ್ ವಿಲೇಜ್ ನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ನಾನು ನನ್ನ ಹೆತ್ತವರನ್ನು ಕಳೆದುಕೊಂಡೆ,’ ಎಂದು ಹೇಳಿಕೊಂಡಿದ್ದಾನೆ.
ಜರ್ಮನಿಯ ಫ್ರಾಂಕ್ ಫರ್ಟ್‌ನಲ್ಲಿ ಎಂಎಸ್ ಶಿಕ್ಷಣವನ್ನು ಪೂರ್ಣಗೊಳಿಸಿ, ಗ್ಲೋಬಲ್ ವಿಲೇಜ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಈ ವ್ಯಕ್ತಿಯೂ ಜೀವನದಲ್ಲಿ ವಿಧಿಯೂ ಆಟವಾಡಿದೆ. ಹೆತ್ತವರನ್ನು ಹಾಗೂ ಪ್ರೀತಿಸುತ್ತಿದ್ದ ಹುಡುಗಿಯೂ ಕಳೆದುಕೊಂಡ ಈತ ಕುಡಿತಕ್ಕೆ ದಾಸನಾಗಿದ್ದಾನೆ. ಇದೀಗ ಜೀವನ ಸಾಗಿಸಲು ಬೆಂಗಳೂರಿನ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾನೆ. ಈ ವಿಡಿಯೋವು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
Click