ಕ್ರೈಂವೈರಲ್ ನ್ಯೂಸ್

ಏನಿದು ಅನಿಲ ಸೋರಿಕೆ..! 28 ಮಂದಿ ಆಸ್ಪತ್ರೆಗೆ ದಾಖಲು..! ಇಲ್ಲಿದೆ ವೈರಲ್ ವಿಡಿಯೋ

203

ನ್ಯೂಸ್ ನಾಟೌಟ್ : ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಉಸಿರಾಟದ ಸಮಸ್ಯೆಯಿಂದಾಗಿ 28 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಗುಜರಾತ್ ನ ಜಂಬುಸಾರ್‌ ನಲ್ಲಿ ನಡೆದಿದೆ.

ಇಲ್ಲಿನ ಪಿ.ಐ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಕಾರಣದಿಂದಾಗಿ ಬ್ರೋಮಿನ್‌ ಅನಿಲ ಸೋರಿಕೆ ಉಂಟಾಗಿದೆ.
ಉಸಿರಾಟ ಸಮಸ್ಯೆ ಕಾಣಿಸಿಕೊಂಡಿರುವ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌ಆರ್‌ ಚಾಂಧಲ್‌ ಬುಧವಾರ ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅನಿಲ ಸೋರಿಕೆಯಾದ ವರದಿಯಾದಾಗ ಕಾರ್ಖಾನೆಯಲ್ಲಿ ಸುಮಾರು 2,000 ಕಾರ್ಮಿಕರು ಇದ್ದರು. ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವೇದಾಚ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೈಶಾಲಿ ಅಹಿರ್ ತಿಳಿಸಿದ್ದಾರೆ.
ಟ್ಯಾಂಕ್ ಬಳಿ ಇದ್ದ ಕಾರ್ಮಿಕರು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋರಿಕೆಯನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

See also  ರಜನಿಕಾಂತ್ ನಟನೆಯ ಜೈಲರ್ ಚಿತ್ರದ ಖಳನಟನ ಅಸಭ್ಯ ವರ್ತನೆ..! ನೆರೆಮನೆಯವರ ಮುಂದೆ ಟವಲ್ ಬಿಚ್ಚಿ ಅರೆನಗ್ನವಾಗಿದ್ದ ನಟನ ವಿಡಿಯೋ ವೈರಲ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget