ಕರಾವಳಿ

ಮಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ ಟ್ಯಾಂಕರ್‌ಗಳಲ್ಲಿ ಗ್ಯಾಸ್ ಸೋರಿಕೆ..! ಆತಂಕದಲ್ಲಿ ಜನತೆ!

347

ನ್ಯೂಸ್ ನಾಟೌಟ್: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಿಂದ ಟ್ಯಾಂಕರ್‌ಗಳಲ್ಲಿ ಗ್ಯಾಸ್ ತುಂಬಿಸಿ ರೈಲು ಮೂಲಕ ಕಳುಹಿಸಲಾಗಿತ್ತು. ಈ ವೇಳೆ ಗ್ಯಾಸ್ ಸೋರಿಕೆಯುಂಟಾದ ಆತಂಕಕಾರಿ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.

ಮಂಗಳೂರಿನಿಂದ ಸುಮಾರು 7 ಕಿ.ಮೀ. ದೂರ ತೆರಳಿದ ಬಳಿಕ ಗ್ಯಾಸ್ ಸೋರಿಕೆಯಾಗಿರುವುದು ಬೆಳಕಿಗೆ ಬಂದು ರೈಲು ವಾಪಸ್ ಹೆಚ್‌ಪಿಸಿಎಲ್‌ಗೆ ಆಗಮಿಸಿದೆ. ಮಂಗಳೂರಿನಿಂದ ಸರಕು ಸಾಗಾಣೆ ರೈಲಿನಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್‌ಗಳನ್ನು ಸಾಗಿಸಲಾಗುತ್ತಿತ್ತು, ಆದರೆ ಕೆಲವೊಂದು ಟ್ಯಾಂಕರ್‌ಗಳಲ್ಲಿ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ತಕ್ಷಣ ಹೆಚ್‌ಪಿಸಿಎಲ್‌ಗೆ ಹಿಂತಿರುಗಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಗ್ಯಾಸ್ ಸೋರಿಕೆಯಾದ ಕಾರಣ ಜೋಕಟ್ಟೆ ಬಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ರೈಲ್ವೇ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ ಮಾಡಲಾಗಿದೆ. ರೈಲ್ವೆ ಹಳಿ ಸುತ್ತಮುತ್ತ ಸಾರ್ವಜನಿಕರು ಬಾರದಂತೆ ಮುನ್ನಚ್ಚರಿಕೆ ವಹಿಸಲಾಗಿದೆ ಎಮದು ವರದಿ ತಿಳಿಸಿದೆ.

See also  ಬಿಜೆಪಿ ನಾಯಕ, ಪುತ್ತೂರಿನ ಮಾಜಿ ಶಾಸಕರಿಗೆ ಕಚ್ಚಿದ ವಿಷಜಂತು..! ಅಪಾಯದಿಂದ ಪಾರು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget