ಕ್ರೈಂಬೆಂಗಳೂರುವೈರಲ್ ನ್ಯೂಸ್

ಬೆಳ್ಳಂಬೆಳಿಗ್ಗೆ ಸಿಲಿಂಡರ್‌ ಸ್ಫೋಟ..! ಐದು ಮನೆಗಳು ಜಖಂ..! ಮುಂದೇನಾಯ್ತು..?

237

ನ್ಯೂಸ್ ನಾಟೌಟ್‌: ಬೆಳ್ಳಂಬೆಳಿಗ್ಗೆ ಭೀಕರ ಗ್ಯಾಸ್‌ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿ, ಐದು ಮನೆ ಛಿದ್ರವಾದ ಘಟನೆ ಜ.೧೬ ರಂದು ಬೆಂಗಳೂರಿನಲ್ಲಿ ನಡೆದಿದೆ.

ಯಲಹಂಕದ ಲಾಲ್‌ಬಹದ್ದೂರ್‌ ಶಾಸ್ತ್ರಿ ಬಡಾವಣೆಯಲ್ಲಿ ಈ ಭೀಕರ ಸ್ಫೋಟ ಸಂಭವಿಸಿದ್ದು, ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಸಿಡಿದ ತೀವ್ರತೆಗೆ ಐದು ಮನೆಗಳು‌ ಡ್ಯಾಮೇಜ್ ಆಗಿವೆ. ಸಿಲಿಂಡರ್ ಸ್ಫೋಟಗೊಂಡ ಮನೆಯ ಇಟ್ಟಿಗೆ ಗೋಡೆಗಳೇ ಕುಸಿದುಬಿದ್ದಿವೆ. ಸ್ಫೋಟದ ತೀವ್ರತೆಗೆ ಲಾಲ್‌ಬಹದ್ದೂರ್ ಶಾಸ್ತ್ರಿ ನಗರದ ಜನತೆ ಬೆಚ್ಚಿಬಿದ್ದಿದ್ದು, ಅಕ್ಕ ಪಕ್ಕದ ಮೂರು ಮನೆಗಳಿಗೆ ತೀವ್ರ ಹಾನಿಗಳಾಗಿವೆ.

ಪಸೀಯಾ ಬಾನು (50), ಸಲ್ಮಾ (22), ಶಾಹಿದ್ (16), ಅಸ್ಮಾ (50) ಅಫ್ರೋಜ್ (23) ಘಟನೆಯಲ್ಲಿ ಗಾಯಗೊಂಡವರು ಎಂದು ತಿಳಿದುಬಂದಿದೆ.

ಸ್ಪೋಟದ ಪರಿಣಾಮ ಒಂದೇ ಕುಟುಂಬದ ಆರು ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

https://newsnotout.com/2024/01/amezon-forest-civilisation-found/
See also  ಗೂಗಲ್‌ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ಯಾರು..? ಗೂಗಲ್ ಬಿಡುಗಡೆ ಮಾಡಿದ ವಿಡಿಯೋದಲ್ಲೇನಿದೆ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget