ಕರಾವಳಿದಕ್ಷಿಣ ಕನ್ನಡಫ್ಯಾಷನ್ಶಿಕ್ಷಣಸುಳ್ಯ

NMC: ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಕಾರ್ಯಾಗಾರ ಹಾಗೂ ಸಂವಾದ, ಮೊಬೈಲ್ ನಲ್ಲೂ ವಿಡಿಯೋ ಎಡಿಟಿಂಗ್ ಬಗ್ಗೆ ಮಾಹಿತಿ

237

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಮಾಹಿತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಮೇ9ರಂದು ನಡೆಯಿತು. ಕಾಲೇಜಿನ ದೃಶ್ಯ ಮತ್ತು ಶ್ರವಣ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. ಸುಳ್ಯದ ಉದಯೋನ್ಮುಖ ಯುಟ್ಯೂಬರ್ ಹಾಗೂ ಪೋಸ್ಟರ್ ಡಿಸೈನರ್ ಆಗಿರುವ ಅದೇ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುರಳಿ ಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಇವರು ವಿದ್ಯಾರ್ಥಿಗಳಿಗೆ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಮಾಡುವುದರ ಬಗ್ಗೆಯೂ ಮಾಹಿತಿ ನೀಡಿದರು. ಮಾತ್ರವಲ್ಲ ಮೊಬೈಲ್ ಮೂಲಕ ಯಾವ ರೀತಿ ವಿಡಿಯೋ ಎಡಿಟಿಂಗ್ ಮಾಡಬಹುದು ಅನ್ನುವುದನ್ನು ಪ್ರಾಯೋಗಿಕವಾಗಿ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಅವಧಿಯಲ್ಲಿಯೇ ಸಮಯಾವಕಾಶ ಸಿಕ್ಕಾಗ ಫೋಟೋ ವಿಡಿಯೋ ಎಡಿಟಿಂಗ್ ಮತ್ತು ಭಿತ್ತಿ ಪತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡು ಆದಾಯ ಪಡೆಯಬಹುದು, ಈ ಕ್ಷೇತ್ರದಲ್ಲಿ ಸಿಗುವ ಉದ್ಯೋಗ ಅವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಕಾಲೇಜಿನ ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಕ್ಷತಾ ಬಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರ್ಷಕಿರಣ ಬಿ ಉಪಸ್ಥಿತರಿದ್ದರು. ಅಂತಿಮ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಕೀರ್ತಿಕಾ ನಿರೂಪಿಸಿ, ವಂದಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿ ಸಂಘದ ನಾಯಕ ಜೋಸ್ಬಿನ್ ಬಾಬು, ನೇಚರ್ ಕ್ಲಬ್ ಸದಸ್ಯರು ಮತ್ತು ಬೋಧಕೇತರ ಸಿಬ್ಬಂದಿ ಸಹಕರಿಸಿದರು.

See also  ಕಡಬ: ತಾಳಿ ಕಟ್ಟುವ ವೇಳೆ ನಿರಾಕರಿಸಿದ ವಧು..! ಠಾಣೆಯ ಮೆಟ್ಟಿಲೇರಿದ ಬಳಿಕ ಸಿಕ್ಕಿತು ಬಿಗ್ ಟ್ವಿಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget