ಕ್ರೈಂಬೆಂಗಳೂರು

ಗಣೇಶ ಹಬ್ಬದ ಸಾಮಗ್ರಿ ತುಂಬಿದ್ದ ಗೋಡೌನ್‌ಗೆ ಬೆಂಕಿ! ಹಬ್ಬದ ವೇಳೆ ಸೂತಕದ ಛಾಯೆ!

ನ್ಯೂಸ್ ನಾಟೌಟ್ : ಗಣೇಶ ಹಬ್ಬದ ಸಾಮಗ್ರಿಗಳನ್ನು ಇಟ್ಟಿದ್ದ ಗೋಡೌನ್‌ಗೆ ಬೆಂಕಿ ಹತ್ತಿದ್ದು, ಗೋಡೌನ್ ಹೊತ್ತಿ ಉರಿದ ಘಟನೆ ಬೆಂಗಳೂರಿನ ಟಿಪ್ಪುನಗರದಲ್ಲಿ ನಡೆದಿದೆ.

ಕಾಟನ್ ಪೇಟೆಯ ವಿನಾಯಕ ಥಿಯೇಟರ್‌ನ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು, ಗೋದಾಮಿನಲ್ಲಿದ್ದ 2 ಸಿಲಿಂಡರ್ ಬ್ಲಾಸ್ಟ್ ಆದ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆಯ ಪರಿಣಾಮ ಗೋಡೌನ್ ಪಕ್ಕದಲ್ಲಿದ್ದ 3-4 ಮನೆಗಳಿಗೂ ಬೆಂಕಿ ತಗುಲಿದೆ.

ಘಟನೆ ನಡೆದ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನ ದೌಡಾಯಿಸಿದ್ದು, ಅಗ್ನಿಶಾಮಕ ಇಲಾಖೆ ಹಾಗೂ ಕಾಟನ್‌ಪೇಟೆ ಪೊಲೀಸರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Related posts

ಶಿರಾಡಿಘಾಟ್‌ ನಲ್ಲಿ ಮತ್ತೆ ಗುಡ್ಡ ಕುಸಿತ..! ತೆರವಾಗಿದ್ದ ರಸ್ತೆ ಮತ್ತೆ ಬಂದ್, ಮಣ್ಣಿನಡಿ ಸಿಲುಕಿದ ಕಂಟೇನರ್..!

ಸುಳ್ಯ: ಬೈಕ್ -ರಿಕ್ಷಾ ಮುಖಾಮುಖಿ,ಬೈಕ್ ಸವಾರ ಗಂಭೀರ ,ಮಂಗಳೂರಿನಲ್ಲಿ ಚಿಕಿತ್ಸೆ

ಮೊದಲ ಬಾರಿಗೆ ಪ್ರಜ್ವಲ್‌ ನನ್ನು ನೋಡಲು ಪರಪ್ಪನ ಆಗ್ರಹಾರಕ್ಕೆ ಬಂದ ರೇವಣ್ಣ..! ಈ ಬಗ್ಗೆ ಹೆಚ್.ಡಿ ರೇವಣ್ಣ ಹೇಳಿದ್ದೇನು..?