ಕರಾವಳಿಬೆಂಗಳೂರುವೈರಲ್ ನ್ಯೂಸ್

2 ಕೋಟಿ ರೂ. ನೋಟು, 50 ಲಕ್ಷ ರೂ. ನಾಣ್ಯಗಳಿಂದ ಗಣಪತಿಗೆ ಶೃಂಗಾರ; ಫೋಟೋಗಳಲ್ಲಿ ನೋಡಿ

304

ನ್ಯೂಸ್ ನಾಟೌಟ್ : ಗಣೇಶ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಘ್ನ ನಿವಾರಕನಿಗೆ ವಿ‍ಶೇಷ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಆದರೆ ಬೆಂಗಳೂರಿನಲ್ಲಿ ಬರೋಬ್ಬರಿ 2 ಕೋಟಿ ರೂ. ಹಣದಿಂದ ಹಾಗೂ 50 ಲಕ್ಷ ರೂ. ನಾಣ್ಯಗಳಿಂದ ಸಿಂಗರಿಸಲಾಗಿದೆ.

ಬೆಂಗಳೂರಿನ ಪುಟ್ಟೇನಹಳ್ಳಿಯ ಜೆ.ಪಿ. ನಗರದ ಸತ್ಯಸಾಯಿ ಗಣಪತಿ ದೇಗುಲವನ್ನು ನೋಟು, ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ. ಬರೋಬ್ಬರಿ 2 ಕೋಟಿ ರೂ.ಗೂ ಹೆಚ್ಚು ನೋಟು ಹಾಗೂ 50 ಲಕ್ಷ ರೂ. ನಾಣ್ಯಗಳಿಂದ ಸಿಂಗರಿಸಲಾಗಿದೆ. 58 ಲಕ್ಷ ಮೌಲ್ಯದ 5, 10, 20 ನಾಣ್ಯಗಳಿಂದ, 10, 20, 50, 100, 200, 500, 2000 ನೋಟುಗಳಿಂದ ಹೂವಿನ ಸರಮಾಲೆ ಮಾಡಿ ವಿಶೇಷ ಬಗೆಯಲ್ಲಿ ಶೃಂಗರಿಸಲಾಗಿರುವುದು ವಿಶೇಷವಾಗಿದೆ.

ಅಲಂಕಾರ ನೋಡಲು ಬರುವ ಭಕ್ತರ ಮೇಲೆ ಸಿಸಿಟಿವಿ ಕಣ್ಗಾವಲು ಇದೆ, ಬ್ಯಾರಿಕೇಡ್ ಹಾಕಿ ಅಲಂಕಾರ ಹಣವನ್ನ ಮುಟ್ಟದಂತೆ ವ್ಯವಸ್ಥೆ ಮಾಡಲಾಗಿದೆ. 22 ಸಿಸಿಟಿವಿ ಅಳವಡಿಕೆ, ಗನ್ ಮ್ಯಾನ್, ಸೆಕ್ಯುರಟಿ, ಟ್ರಸ್ಟ್ ಸದಸ್ಯರು ಭಕ್ತರು ನಿರಂತರವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಚಂದ್ರಯಾನ – 3, ಜೈ ಕರ್ನಾಟಕ, ಜೈ ಜವಾನ್ ಜೈ ಕಿಸಾನ್ , ಮೇರಾ ಭಾರತ್‌ ಮಹಾನ್‌ ಥೀಮ್‌ ಅಳವಡಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಮತ್ತು 150 ಕ್ಕೂ ಜನರ ಈ ಅಲಂಕಾರವನ್ನು ಮಾಡಿದ್ದು, ಇವರ ಕೈ ಚಳಕ್ಕೆ ಜನರು ಫಿದಾ ಆಗಿದ್ದಾರೆ.

See also  ನದಿಯಲ್ಲಿ ಸ್ನಾನದ ವೇಳೆ ಮೀನೆಂದು ಮೊಸಳೆಯನ್ನು ಹಿಡಿದ ವ್ಯಕ್ತಿ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget