ಕ್ರೈಂರಾಜಕೀಯವೈರಲ್ ನ್ಯೂಸ್

ಗಣೇಶ ಮೂರ್ತಿಯನ್ನಿರಿಸಿದ್ದ ಪೆಂಡಾಲ್ ನಲ್ಲಿ ದಿಢೀರ್ ಬೆಂಕಿ..! ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಾರ್ಥಿಸುತ್ತಿದ್ದಾಗ ಘಟನೆ! ಮುಂದೇನಾಯ್ತು?

220

ನ್ಯೂಸ್ ನಾಟೌಟ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಭವಾಂಕುಲೆ ಜತೆ ಪ್ರಾರ್ಥನೆ ಸಲ್ಲಿಸುವಾಗ, ಗಣೇಶನ ಮೂರ್ತಿ ಇರಿಸಿದ್ದ ಪೆಂಡಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಪುಣೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಘಟನೆ ನಡೆಯುತ್ತಿದ್ದಂತೆಯೇ ಜೆ.ಪಿ.ನಡ್ಡಾಗೆ ರಕ್ಷಣೆ ನೀಡಲಾಯಿತು. ಪುಣೆ ನಗರದ ಹೃದಯ ಭಾಗದಲ್ಲಿರುವ ಲೋಕಮಾನ್ಯ ನಗರ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಪೆಂಡಾಲ್ ನ ಮೇಲ್ಭಾಗಕ್ಕೆ ಬೆಂಕಿ ಹತ್ತಿಕೊಂಡಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.

ಕೆಲವು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರಿಂದ ಪೆಂಡಾಲ್ ಗೆ ಬೆಂಕಿ ಹತ್ತಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಎಂದು ವರದಿ ತಿಳಿಸಿದೆ.

See also  1200ಕ್ಕೂ ಹೆಚ್ಚು ಮಹಿಳೆಯರಿಂದ ದಿಢೀರ್ ದಾಳಿ! 12 ಉಗ್ರರನ್ನು ಬಿಟ್ಟುಕಳುಹಿಸಿದ್ದೇಕೆ ಸೇನೆ! ಇಲ್ಲಿದೆ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget