ಕ್ರೈಂರಾಜ್ಯ

ಗಣೇಶನ ಪೂಜೆಗೆ ಇಟ್ಟ ಹಣಕ್ಕಾಗಿ ಸಹೋದರರ ನಡುವೆ ಗಲಾಟೆ..! ಅಣ್ಣನಿಗೇ ಚೂರಿ ಇರಿದ ತಮ್ಮ..!

231

ನ್ಯೂಸ್ ನಾಟೌಟ್: ಮನೆಯಲ್ಲಿ ಗಣೇಶನ ಪೂಜೆ ಮಾಡುವ ವಿಚಾರಕ್ಕೆ ಸಹೋದರರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ನಡೆದಿದೆ.

ಸಂದೇಶ್ ಪ್ರಭಾಕರ್ ಬೋರ್ಕರ್, ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮನೀಶ್ ಕಿರಣ್ ಬೋರ್ಕರ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಶರತ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರತೀ ವರ್ಷ ಗಣಪತಿ ಹಬ್ಬದಂದು ಶಿರಸಿಯಿಂದ ಬರುವ ಕುಟುಂಬಸ್ಥರು ಕಾರವಾರದಲ್ಲಿ ಎಲ್ಲರೂ ಸೇರಿ ಗಣೇಶನ ಹಬ್ಬ ಮಾಡುತ್ತಿದ್ದರು. ಪ್ರಭಾಕರ್ ಎಂಬವರು ಕಳೆದ ವರ್ಷದ ಹಣದ ಲೆಕ್ಕ ನೀಡಿಲ್ಲ ಎಂದು ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ. ಈ ವೇಳೆ ಪ್ರಭಾಕರ್ ಮಕ್ಕಳಾದ ಸಂದೇಶ ಹಾಗೂ ಶರತ್ ಸಹಾಯಕ್ಕೆ ಬಂದಿದ್ದಾರೆ. ಇದನ್ನು ನೋಡಿ ಪ್ರಭಾಕರ್ ತಂಗಿ ಮಕ್ಕಳಾದ ಕಿರಣ್, ಪ್ರಶಾಂತ್, ರತನ್, ಮನೀಶ್ ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಮನೀಶ್ ಎಂಬಾತ ಚಾಕು ಹಿಡಿದು ಸಂದೇಶ್ ಪ್ರಭಾಕರ್ ನ ಹೊಟ್ಟೆಗೆ ಇರಿದಿದ್ದಾನೆ. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮನೀಶ್ ಕಿರಣ್ ಹಾಗೂ ಉಳಿದವರನ್ನು ಬಂಧಿಸಿದ್ದಾರೆ.

See also  ಕ್ರೈಸ್ತ ಧರ್ಮದ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ನಿಧನ, ಕ್ರೈಸ್ತ ಸಮುದಾಯದಲ್ಲಿ ಮಡುಗಟ್ಟಿದ ಶೋಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget