Latestಕ್ರೈಂರಾಜ್ಯ

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ..! 26 ಮಂದಿ ವಶಕ್ಕೆ, 25 ಲಕ್ಷ ಜಪ್ತಿ..!

1k

ನ್ಯೂಸ್ ನಾಟೌಟ್: ದಾವಣಗೆರೆ ಡೆಂಟಲ್ ಕಾಲೇಜ್ ರಸ್ತೆಯ ಹೋಟೆಲ್ ಒಂದರಲ್ಲಿ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಹೋಟೆಲ್‍ನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಅಂದರ್ ಬಾಹರ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲೇ ಜೂಜಾಡುತ್ತಿದ್ದ 26 ಮಂದಿಯನ್ನು ವಶಕ್ಕೆ ಪಡೆದಿದ್ದು, ಅಡ್ಡೆಯಲ್ಲಿದ್ದ 24,86,500 ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಎಸ್‍ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿಗಳ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿಟ್ಟಿದ್ದಾರೆ.
ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮಹಿಳೆಯ ಹುಚ್ಚಾಟಕ್ಕೆ ಐದು ಸಾವಿರ ರೂ. ದಂಡ ವಿಧಿಸಿದ ಪೊಲೀಸರು..!ತಲೆಗೆ ದುಪ್ಪಟ ಕಟ್ಟಿ ಮೊಬೈಲ್​​ನಲ್ಲಿ ಟಾಕಿಂಗ್ ಟ್ರಾವೆಲ್ ಮಾಡಿದ್ದಕ್ಕೆ ಫನಿಶ್‌ಮೆಂಟ್‌!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget