ಕ್ರೈಂಪುತ್ತೂರು

ಪುತ್ತೂರು: ಜೂಜಾಟ ಅಡ್ಡೆ ಮೇಲೆ ದಾಳಿ! ಆರೋಪಿಗಳ ಬಂಧನ!

330

ನ್ಯೂಸ್ ನಾಟೌಟ್: ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ತುಂಬುತಡ್ಕ ಎಂಬಲ್ಲಿ ಜೂಜಾಟ ಅಡ್ಡೆಗೆ ಮಾ.28 ರಾತ್ರಿ ದಾಳಿ ನಡೆಸಿದ ಸಂಪ್ಯ ಪೊಲೀಸರು ಸೊತ್ತುಗಳ ಸಹಿತ ಆರೋಪಿಗಳನ್ನು ಬಂಧಿಸಿದ ಘಟನೆ ವರದಿಯಾಗಿದೆ.

ತಂಬುತ್ತಡ್ಕ ಗುಡ್ಡ ಸ್ಥಳದಲ್ಲಿ ಅಕ್ರಮವಾಗಿ “ಉಲಾಯಿ-ಪಿದಾಯಿ” ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ.

ಲೊಕೇಶ್ ಅನಂತಾಡಿ, ಹೇಮನಾಥ ಆರ್ಲಪದವು, ಸಂತೋಷ ಕೌಡಿಚ್ಚಾರು, ಸದಾನಂದ ಅರಿಯಡ್ಕ, ಉಮೇಶ ನಿಡ್ಪಳ್ಳಿ, ಸತೀಶ್ ಶೆಟ್ಟಿ ಸಾಲೆತ್ತೂರು ಬಂಧಿತರು. ಆರೋಪಿಗಳಿಂದ ಆರು ಮೊಬೈಲ್ ಫೋನ್‌ಗಳು, ಹಾಗೂ 35710/- ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.. ಘಟನೆ ಕುರಿತು ಸಂಪ್ಯ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಮಂಗಳೂರು: ಗುಪ್ತಾಂಗದಲ್ಲಿಟ್ಟು 349 ಗ್ರಾಂ. ಚಿನ್ನ ಕಳ್ಳಸಾಗಣೆ ಮಾಡಿದ ಮಹಿಳೆ..! ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಳು ಹೀಗೊಬ್ಬಳು ಚಾಲಾಕಿ ಕಳ್ಳಿ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget