ಚಿಕ್ಕಮಗಳೂರು

ಜೂಜು ಅಡ್ಡೆ ಮೇಲೆ ಪೊಲೀಸರ ದಿಢೀರ್ ದಾಳಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕಿ ಆಪ್ತ!

ನ್ಯೂಸ್ ನಾಟೌಟ್ :  ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಿಂದ ವರದಿಯಾಗಿದೆ.ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ( MLA nayana motamma) ಅವರ ಆಪ್ತ ತೇಜಸ್ ಎಂಬಾತನು ಕೂಡ ಜೂಜಾಟದಲ್ಲಿ (Gambling Case) ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ಆಲ್ದೂರು ಸಮೀಪದ ಕಂಚಿಕಲ್ ದುರ್ಗ ಗ್ರಾಮದ ಬಳಿ ಮಧು ಎಂಬುವರ ಎಸ್ಟೇಟ್‌ಗೆ ಹೋಗುವ ಸಾರ್ವಜನಿಕ ಪ್ರದೇಶದಲ್ಲಿ ಜೂಜು ಆಡುತ್ತಿದ್ದರು.ಈ ವೇಳೆ ಮಾಜಿ ಯೂತ್ ಕಾಂಗ್ರೆಸ್ ಮುಖಂಡನಾಗಿರುವ ತೇಜಸ್ ಸಿ.ಆರ್ ಸಿಕ್ಕಿಬಿದ್ದಿದ್ದಾನೆ.

ತೇಜಸ್‌ ಸುಮಾರು 15 ಜನರ ಜತೆ ಅಂದರ್-ಬಾಹರ್ ಆಡುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಬಂದು ಜೂಜು ಅಡ್ಡೆ ಮೇಲೆ ಸೆನ್ ಇನ್ಸ್‌ಪೆಕ್ಟರ್‌ ಗವಿರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ತೇಜಸ್‌ ಸೇರಿ ಎಲ್ಲರನ್ನೂ ವಶಕ್ಕೆ ಪಡೆದು,ವಿಚಾರಣೆ ನಡೆಸಲಾಗಿದೆ.ಈ ಸಂದರ್ಭ 1,53,000 ರೂ. ಹಣ, ಮೂರು ಕಾರು, 10 ಮೊಬೈಲ್‌ಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related posts

ಚಾರ್ಮಾಡಿ: ಭಾರಿ ಮಳೆಗೆ ರಸ್ತೆಗೆ ಕುಸಿದ ಗುಡ್ಡ, ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತ

ಕೆಎಸ್‌ಆರ್‌ಟಿಸಿ ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ..!,ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದ ಚಾಲಕ..

ಬಾಲರಾಮನ ಪ್ರಾಣಪ್ರತಿಷ್ಠಾ ದಿನ ಗೈರಾದ್ರೆ 1 ಸಾವಿರ ದಂಡ ಪ್ರಕರಣ,ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹೇಳಿದ್ದೇನು?