Latestಕ್ರೈಂಸಿನಿಮಾ

ಬೆಟ್ಟಿಂಗ್‌ ಆ್ಯಪ್ ಪ್ರಚಾರ ಮಾಡಿದ ವಿಜಯ್ ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ ಖ್ಯಾತ 25 ನಟರ ಮೇಲೆ ಕೇಸ್‌..! ಇಲ್ಲಿದೆ ಸಂಪೂರ್ಣ ಮಾಹಿತಿ

416

ನ್ಯೂಸ್ ನಾಟೌಟ್: ಬೆಟ್ಟಿಂಗ್‌ ಅಪ್ಲಿಕೇಶನ್‌ ಪ್ರಚಾರ ಮಾಡಿದ್ದಕ್ಕೆ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್‌ ರಾಜ್‌ ಸೇರಿದಂತೆ ಟಾಲಿವುಡ್ 25 ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹೈದರಾಬಾದ್‌ ನ ಮಿಯಾಪುರ್ ಪೊಲೀಸರು ಟಾಲಿವುಡ್ ನಟರು ಮತ್ತು ಸೋಶಿಯಲ್‌ ಮೀಡಿಯಾ ಇನ್‌ ಫ್ಲೂಯನ್ಸ್‌ರ್‌ ಗಳ ಮೇಲೆ ಕೇಸ್‌ ದಾಖಲಿಸಿದ್ದಾರೆ.

ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ , ಅನನ್ಯಾ, ಶ್ರೀಮುಖಿ, ಸಿರಿ ಹನುಮಂತು, ಶ್ಯಾಮಲಾ, ವರ್ಷಿಣಿ, ಶೋಭಾ, ನೇಹಾ, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಸನ್ನಿ ಯಾದವ್, ಟೇಸ್ಟಿ ತೇಜಾ ಮತ್ತು ರಿತು ಸೇರಿದಂತೆ ಹಲವರ ಮೇಲೆ ಎಫ್‌ ಐಆರ್‌ ದಾಖಲಾಗಿದೆ.

ಈ ಪ್ರಸಿದ್ಧ ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಉದ್ದೇಶಪೂರ್ವಕವಾಗಿ ಬೆಟ್ಟಿಂಗ್ ಅಪ್ಲಿಕೇಶನ್‌ ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇವರ ಪ್ರಚಾರ ಮಡುವ ಮೂಲಕ ಯುವ ಜನರ ಮನಸ್ಸು ಹಾಳಾಗುತ್ತಿದೆ. ಇದರಿಂದ ಅನೇಕ ಮನೆಗಳಲ್ಲಿ ಆರ್ಥಿಕ ತೊಂದರೆಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಹಾಕಿ ಯುವ ಜನತೆ ನಷ್ಟಕ್ಕೆ ತುತ್ತಾಗಿದ್ದಾರೆ. ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ತೆಲಂಗಾಣ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಇದರ ಹೊರತಾಗಿಯೂ ಬೆಟ್ಟಿಂ ಗ್ಆಪ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

See also  ಕೇಕ್ ತಿಂದು 5 ವರ್ಷದ ಮಗು ಸಾವು..! ತಂದೆ-ತಾಯಿಯ ಸ್ಥಿತಿಯೂ ಗಂಭೀರ..! ಆರ್ಡರ್ ಕ್ಯಾನ್ಸಲ್ ಆದದ್ದೇ ಡೆಲಿವರಿ ಬಾಯ್ ಗೆ ಮುಳುವಾಯ್ತಾ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget